GandhaKuti - ಗಂಧಕುಟಿ - गंधकुटी

GandhaKuti - ಗಂಧಕುಟಿ - गंधकुटी ತೀರ್ಥಂಕರರು ಕುಳಿತು ಉಪದೇಶಿಸುವ ಸಮವಸರಣದ ಮಧ್ಯ ಭಾಗವೇ 'ಗಂಧಕುಟಿ'

GREETINGS for Republic DaySome like Sunday,Some like Monday,  But I like One Day, And that is Republic DayFreedom is ind...
26/01/2023

GREETINGS for Republic Day

Some like Sunday,Some like Monday, But I like One Day, And that is Republic Day
Freedom is indeed the most expensive as it came after the sacrifices of our freedom fighters, so never take it for granted. A thoughtful mind, when it sees a nation’s flag, sees not the flag, but the nation itself -Freedom of thought, strength in our convictions and pride in our heritage. Let’s salute our brave martyrs on Republic Day.

Celebrate the hard-earned freedom of our soldiers and the struggles faced by our ancestors. Let us not forget the rich heritage of our country and feel proud to be a part of this nation. With faith in our hearts and independence in our thoughts, let’s salute the Nation. A great greetings on occasion of Republic Day!
Gunjals

26/12/2022

ಶಿಖರ್ಜಿ ಆಂದೋಲನ್

This is gandha kuti channel I request all thr viewer to subscribe Gandhakuti channel 🙏 ಜೈ ಜಿನೇಂದ್ರ   🙏 ಗಂಧಕುಟಿ ಯುಟ್ಯೂಬ್ ...
19/11/2022

This is gandha kuti channel I request all thr viewer to subscribe Gandhakuti channel 🙏 ಜೈ ಜಿನೇಂದ್ರ 🙏 ಗಂಧಕುಟಿ ಯುಟ್ಯೂಬ್ ಚಾನೆಲ್ ಅನ್ನು ಪ್ರತಿಯೊಬ್ಬೈನಬಂದವರು ಸಬ್ಸ್ಕ್ರೈಬ್ ಮಾಡಬೇಕೆಂದು ವಿನಂತಿ. ಧರ್ಮ ಪ್ರಭಾವನೆಯಾಗಿ ನಡೆಯುತ್ತಿರುವ ಈ ಗಂಧಕುಟಿ ಎಲ್ಲರ ಮನಮನದಲ್ಲಿ ನೆಲೆಸಲಿ

Share your videos with friends, family, and the world

* #ಓಂ_ಶ್ರೀ_ಭಗವಾನ್_ಮಹಾವೀರ_ಸ್ವಾಮಿಯೇ_ನಮಃ** #ಸಂಚಿಕೆ_1034** #ದ್ರವ್ಯಾನುಯೋಗ** #ಗುಣಸ್ಥಾನ**ಗುಣಸ್ಥಾನ_ಭೇದಗಳು_ಮತ್ತು_ಸ್ವರೂಪ** #ಜೀವ ಸಮ...
26/09/2022

* #ಓಂ_ಶ್ರೀ_ಭಗವಾನ್_ಮಹಾವೀರ_ಸ್ವಾಮಿಯೇ_ನಮಃ*

* #ಸಂಚಿಕೆ_1034*
* #ದ್ರವ್ಯಾನುಯೋಗ*
* #ಗುಣಸ್ಥಾನ*
*ಗುಣಸ್ಥಾನ_ಭೇದಗಳು_ಮತ್ತು_ಸ್ವರೂಪ*

* #ಜೀವ ಸಮಾಸ_ಪರ್ಯಾಪ್ತಿ_ಪ್ರಾಣ_ಮತ್ತು_ಸಂಜ್ಞಾ*

ಯಾರ ಹತ್ತಿರ ಒಂದೇ ಒಂದು ಸ್ಪರ್ಶ ಇಂದ್ರಿಯ ಇದೆಯೋ , ಆ ಜೀವಗಳನ್ನು ಏಕೇಂದ್ರಿಯವೆಂದು ಕರೆಯುತ್ತಾರೆ . ಏಕೇಂದ್ರಿಯಗಳು ಎರಡು ಪ್ರಕಾರದವುಗಳಾಗಿವೆ – ಬಾದರ ಮತ್ತು ಸೂಕ್ಷ್ಮ. ಯಾವ ಜೀವಗಳು ಬೇರೆಯವರಿಗೆ ಬಾಧೆಯನ್ನುಂಟುಮಾಡುತ್ತವೋ ಅಥವಾ ಬೇರೆಯವರಿಂದ ಬಾಧೆಗೆ ಒಳಗಾಗುತ್ತವೋ ಅವುಗಳನ್ನು ಬಾದರವೆನ್ನುತ್ತಾರೆ . ಹಾಗೂ ಬೇರೆಯವರಿಗೆ ಬಾಧೆಯನ್ನುಂಟು ಮಾಡದ ಮತ್ತು ಬೇರೆಯವರಿಂದ ಬಾಧೆಗೆ ಒಳಗಾಗದ ಜೀವಗಳನ್ನು ಸೂಕ್ಷ್ಮ ಜೀವಿಗಳೆಂದು ಹೇಳುತ್ತಾರೆ . ಸೂಕ್ಷ್ಮ ಜೀವಗಳು ಸಂಪೂರ್ಣ ಲೋಕದಲ್ಲಿ ತುಂಬಿಕೊಂಡಿವೆ . ಬಾದರ ಏಕೇಂದ್ರಿಯಗಳ ಸ್ಥಾನವು ಲೋಕದ ಕೆಲವೇ ಭಾಗಗಳಲ್ಲಿದೆ . ಯಾವ ಜೀವಗಳಲ್ಲಿ ಸ್ಪರ್ಶನ ಮತ್ತು ರಸನ ಇಂದ್ರಿಯಗಳು ಕಂಡುಬರುತ್ತವೆಯೋ , ಅವುಗಳನ್ನು ಎರಡು ಇಂದ್ರಿಯ ಜೀವಗಳೆಂದು ಕರೆಯುತ್ತಾರೆ . ಮೂರು ಇಂದ್ರಿಯವುಳ್ಳ ಜೀವಿಗಳಿಗೆ ಸ್ಪರ್ಶನ , ರಸನ ಮತ್ತು ಘ್ರಾಣ ಇಂದ್ರಿಯಗಳಿರುತ್ತವೆ . ನಾಲ್ಕು ಇಂದ್ರಿಯ ಜೀವಗಳಿಗೆ ಸ್ಪರ್ಶನ , ರಸನ , ಘ್ರಾಣದ ಜೊತೆಗೆ ಚಕ್ಷು ಇಂದ್ರಿಯವಿರುತ್ತದೆ . ಈ ಮೂರನ್ನೂ ವಿಕಲೇಂದ್ರಿಯಗಳೆಂದೂ ಕರೆಯುತ್ತಾರೆ , ಏಕೆಂದರೆ ಇವುಗಳಿಗೆ ವಿಕಲ ಎಂದರೆ ಅಪೂರ್ಣ ಇಂದ್ರಿಯಗಳಿರುತ್ತವೆ .

ಪಂಚೇಂದ್ರಿಯ ಜೀವಿಗಳಿಗೆ ಸ್ಪರ್ಶನ , ರಸನ , ಘ್ರಾಣ , ಚಕ್ಷು ಮತ್ತು ಕರ್ಣಗಳೆಂಬ ಐದು ಇಂದ್ರಿಯಗಳು ಕಂಡುಬರುತ್ತವೆ . ಇವುಗಳನ್ನು ಸಕಲೇಂದ್ರಿಯಗಳೆಂದೂ ಕರೆಯುತ್ತಾರೆ . ಪಂಚೇಂದ್ರಿಯಗಳು ಎರಡು ಪ್ರಕಾರವಾಗಿವೆ - ಸಂಜ್ಞಿ ಮತ್ತು ಅಸಂಜ್ಞಿ , ಮನ ಸಹಿತವಾದ ಜೀವವು ಸಂಜ್ಞೀ ಮತ್ತು ಮನರಹಿತ ಜೀವವು ಅಸಂಜ್ಞೆ ಎಂದು ಕರೆಸಿಕೊಳ್ಳುತ್ತವೆ .

ಈ ರೀತಿಯಾಗಿ ಎರಡು ಪ್ರಕಾರದ ಏಕೇಂದ್ರಿಯ , ವಿಕಲೇಂದ್ರಿಯ ಮತ್ತು ಎರಡು ಪ್ರಕಾರದ ಪಂಚೇಂದ್ರಿಯ ಈ ಏಳು ಪ್ರಕಾರದ ಜೀವಗಳಲ್ಲಿ ಕೆಲವು ಪರ್ಯಾಪ್ತವಾಗಿರುತ್ತವೆ ಮತ್ತೆ ಕೆಲವು ಅಪರ್ಯಾಪ್ತವಾಗಿರುತ್ತವೆ . ಯಾವ ಜೀವನು ತನ್ನ ಪರ್ಯಾಪ್ತಿಗಳನ್ನು ಪೂರ್ಣಮಾಡಿರುತ್ತಾನೋ ಅವರೇ ಪರ್ಯಾಪ್ತರು ಮತ್ತು ಯಾರ ಪರ್ಯಾಪ್ತಿಗಳು ಅಪೂರ್ಣವಾಗಿರುತ್ತವೆಯೋ ಅವರಿಗೆ ಅಪರ್ಯಾಪ್ತರು ಎಂದು ಕರೆಯುವರು . ಮೇಲೆ ಹೇಳಿದ ಏಳು ಪ್ರಕಾರದ ಜೀವರಲ್ಲಿ ಪರ್ಯಾಪ್ತ ಮತ್ತು ಅಪರ್ಯಾಪ್ತ ಭೇದದ ಅಪೇಕ್ಷೆಯಿಂದ ಹದಿನಾಲ್ಕು ಭೇದಗಳುಂಟಾಗುತ್ತವೆ . ಅವುಗಳನ್ನು ಹದಿನಾಲ್ಕು ಜೀವ ಸಮಾಸಗಳು ಎಂದು ಹೇಳುತ್ತಾರೆ , ಏಕೆಂದರೆ ಜೀವ ಕುಲದ ಸಮಸ್ತ ಜಾತಿಗಳ ಭೇದ ಪ್ರಭೇದಗಳ ಸಂಗ್ರಹವು ಇದರಲ್ಲಿ ಆಗುತ್ತದೆ .

* #ಮುಂದುವರೆಯುತ್ತದೆ.....*
( ಆಧಾರ - ಜೈನ ತತ್ತ್ವ ವಿದ್ಯಾ ).

23/09/2022
* #ಭಕ್ತಾಮರ_ಸ್ತೋತ್ರ*( ಶ್ರೀ ಮಾನತುಂಗಾಚಾರ್ಯ ದೇವ ವಿರಚಿತ )ಭಾಗ - 13* #ಜಿನೇಂದ್ರಮುಖವರ್ಣನೆ**ವಕ್ತ್ರಂ  ಕ್ವತೇ ಸುರನರೋರಗ ನೇತ್ರಹಾರಿ |**ನ...
23/09/2022

* #ಭಕ್ತಾಮರ_ಸ್ತೋತ್ರ*
( ಶ್ರೀ ಮಾನತುಂಗಾಚಾರ್ಯ ದೇವ ವಿರಚಿತ )
ಭಾಗ - 13
* #ಜಿನೇಂದ್ರಮುಖವರ್ಣನೆ*

*ವಕ್ತ್ರಂ ಕ್ವತೇ ಸುರನರೋರಗ ನೇತ್ರಹಾರಿ |*
*ನಿಶ್ಯೇಷ ನಿರ್ಜಿತ ಜಗತ್ತ್ರಿತಯೋಪಮಾನಮ್ |*
*ಬಿಂಬಂ ಕಲಂಕಮಲಿನಂ ಕ್ವ ನಿಶಾಕರಸ್ಯ |*
*ಯದ್ವಾಸರೇ ಭವತಿ ಪಾಂಡು ಪಲಾಶಕಲ್ಪಂ ॥ ೧೩॥*

* #ಅನ್ವಯಾರ್ಥ* - ನಿಶ್ಯೇಷನಿರ್ಜಿತ = ನಿಶೇಷವಾಗಿ ಗೆದ್ದ , ಜಗತ್ತಿತಪಯೋಪ ಮಾನಂ = ಮೂರುಲೋಕಕ್ಕೆ ಸಮಾನವಾಗಿದ್ದು , ಸುರನರೋರಗ = ದೇವತೆಗಳ ಮನುಷ್ಯರ , ನಾಗಗಳ , ನೇತ್ರಹಾರಿ = ಕಣ್ಣಳನ್ನು ಆಕರ್ಷಿಸುವ , ತೇ = ನಿಮ್ಮ ವಕ್ಕಂ = ಮುಖವು , ಕೈ ಎಲ್ಲಿ ? ನಿಶಾಕರಸ್ಯ ಚಂದ್ರನ , ಕಲಂಕಮಲಿನಂ = ಕಳಂಕದಿಂದ ಮಲಿನವಾದ , ಬಿಂಬಂ = ಬಿಂಬವು , ಕ್ವ = ಎಲ್ಲಿ ? ನಿಶಾಕರಸ್ಯ = ಚಂದ್ರನ, ಕಲಂಕಮಲಿನಂ = ಕಳಂಕದಿಂದ ಮಲಿನವಾದ, ಬಿಂಬಂ = ಬಿಂಬವು , ಕ್ವ = ಎಲ್ಲಿ ? ಯಾವ ಬಿಂಬವು , ವಾಸರೇ = ಪ್ರಾತಃಕಾಲದಲ್ಲಿ , ಪಾಂಡುಪಲಾಶಕಲ್ಪಂ = ಬಿಳಿಚಿಕೊಂಡ ಮುತ್ತಗದ ಎಲೆಗೆ ಸಮಾನವಾಗಿ , ಭವತಿ = ಆಗುತ್ತದೆ .

* #ಭಾವಾರ್ಥ* - ಮೂರು ಲೋಕಗಳಿಗೆ ಸಮಾನರೂ , ದೇವತೆ , ನಾಗದೇವತೆ , ಮನುಷ್ಯ ( ಭವನಪತಿ , ವ್ಯಂತರ , ಜೋತಿಷ್ಯ ದೇವತೆಗಳನ್ನೂ ಕೂಡ ಕಲ್ಪಿಸಿಕೊಳ್ಳಬೇಕು ) ಮೊದಲಾದವರ ಕಣ್ಗಳಿಗೆ ಸಂತೋಷವನ್ನುಂಟು ಮಾಡತಕ್ಕವರೂ ಆದ ನಿಮ್ಮ ಮುಖವೆಲ್ಲಿ ? ದೋಷಯುಕ್ತವೂ ( ಕಪ್ಪು ಚಿಹ್ನೆಯುಳ್ಳುದೂ ) ಪ್ರಭಾತ ಕಾಲದಲ್ಲಿ ಒಣಗಿದ ಮುತ್ತುಗದ ಎಲೆಯಂತೆ ಬಿಳಿಚಿಕೊಂಡಂತೆ ಕಾಣತಕ್ಕದೂ ಆದ ಚಂದ್ರಬಿಂಬವೆಲ್ಲಿ ? ಇಲ್ಲಿ ಜಿನೇಶ್ವರರ ಮುಖಕ್ಕೆ ಚಂದ್ರಬಿಂಬದ ಸಾದೃಶ್ಯವು ಸರಿಸಮಾನವಾಗಲಾರದೆಂದು ಭಾವವು .

* #ಮುಂದುವರೆಯುತ್ತದೆ...*

* #ಭಕ್ತಾಮರ_ಸ್ತೋತ್ರ*( ಶ್ರೀ ಮಾನತುಂಗಾಚಾರ್ಯ ದೇವ ವಿರಚಿತ )ಭಾಗ - 12* #ಭಗವದ್ರೂಪವರ್ಣನೆ**ಯೈಃ ಶಾಂತರಾಗರುಚಿಭಿಃ ಪರಮಾಣುಭಿಸ್ತ್ವಂಃ |**ನಿರ...
22/09/2022

* #ಭಕ್ತಾಮರ_ಸ್ತೋತ್ರ*
( ಶ್ರೀ ಮಾನತುಂಗಾಚಾರ್ಯ ದೇವ ವಿರಚಿತ )
ಭಾಗ - 12
* #ಭಗವದ್ರೂಪವರ್ಣನೆ*

*ಯೈಃ ಶಾಂತರಾಗರುಚಿಭಿಃ ಪರಮಾಣುಭಿಸ್ತ್ವಂಃ |*
*ನಿರ್ಮಾಪಿತ ಸ್ತ್ರಿಭುವನೈ ಕಲಲಾಮಭೂತಃ |*
*ತಾವಂತ ಏವ ಖಲುತೇಷ್ಯಣವಃ ಪೃಥಿವ್ಯಾಂ |*
*ಯತ್ತೇ ಸಮಾನಮಪರಂ ನಹಿ ರೂಪಮಸ್ತಿ || ೧೨ ||*

* #ಅನ್ವಯಾರ್ಥ* - ತ್ರಿಭುವನೈಕಲಲಾಮಭೂತಃ = ಮೂರು ಲೋಕಗಳಿಗೆ ಅಲಂಕಾರ ಪ್ರಾಯರಾಗಿರುವ , ತ್ವಂ = ನೀವು , ಶಾಂತರಾಗರುಚಿಭೀಃ = ಆಶೆಯಿಲ್ಲದ ಶಾಂತಸ್ವಭಾವವುಳ್ಳ, ಯೈಃ = ಯಾವ , ಪರಮಾಣುಭಿಃ = ಪರಮಾಣುಗಳಿಂದ ನಿರ್ಮಾಪಿತಃ = ನಿರ್ಮಿತವಾಗಿರುವ ತೇ = ಆ , ಅಣವಃ = ಪರಮಾಣುಗಳು ಪೃಥಿವ್ಯಾಂ = ಭೂಮಿಯಲ್ಲಿ , ತಾವಂತ ಏವ = ಅಷ್ಟೇ ಪ್ರಕಾರದ , ಯತ್ = ಯಾವ ಕಾರಣದಿಂದ , ತೇ ಸಮಾನಂ = ನಿಮಗೆ ಸಮಾನವಾದ, ಅಪರಂ ರೂಪಂ = ಬೇರೆ ರೂಪವು, ಹೀನಾಸ್ತಿ ನಿಶ್ಚಯವಾಗಿ ಇಲ್ಲ .

* #ಭಾವಾರ್ಥ* - ಮೂರು ಲೋಕಗಳಲ್ಲಿಯೂ ಅಲಂಕಾರಪ್ರಾಯರಾದವರೇ ! ಶಾಂತಸ್ವಭಾವದ ನಿಮ್ಮ ರೂಪಿನಲ್ಲಿ ಸೇರಿರತಕ್ಕ ಪರಮಾಣುಗಳು ಅಷ್ಟಕ್ಕೆ ಮುಗಿದು ಹೋಗಿರಬೇಕೆಂದು ತೋರುತ್ತದೆ . ಏಕೆಂದರೆ ನಿಮ್ಮ ರೂಪನ್ನು ಹೋಲತಕ್ಕ ಬೇರೆ ಯಾವ ರೂಪಗಳೂ ಲೋಕದಲ್ಲಿ ಇದುವರೆಗೆ ಕಂಡುಬರಲಿಲ್ಲ .

* #ಮುಂದುವರೆಯುತ್ತದೆ....*

* #ಓಂ_ಶ್ರೀ_ಭಗವಾನ್_ಮಹಾವೀರ_ಸ್ವಾಮಿಯೇ_ನಮಃ** #ಸಂಚಿಕೆ_1032** #ದ್ರವ್ಯಾನುಯೋಗ** #ಗುಣಸ್ಥಾನ**ಗುಣಸ್ಥಾನ_ಭೇದಗಳು_ಮತ್ತು_ಸ್ವರೂಪ** #ಗುಣಸ್ಥ...
22/09/2022

* #ಓಂ_ಶ್ರೀ_ಭಗವಾನ್_ಮಹಾವೀರ_ಸ್ವಾಮಿಯೇ_ನಮಃ*

* #ಸಂಚಿಕೆ_1032*
* #ದ್ರವ್ಯಾನುಯೋಗ*
* #ಗುಣಸ್ಥಾನ*
*ಗುಣಸ್ಥಾನ_ಭೇದಗಳು_ಮತ್ತು_ಸ್ವರೂಪ*

* #ಗುಣಸ್ಥಾನಗಳಿಂದ_ಆರೋಹಣೆ_ಅವರೋಹಣೆಯ ಕ್ರಮ*

ಈ ರೀತಿಯಾಗಿ ಈ ಹದಿನಾಲ್ಕು ಗುಣಸ್ಥಾನಗಳಿಂದ ಸಾಗುತ್ತಾ ಜೀವನು ತನ್ನ ಆತ್ಮ ವಿಕಾಸದ ಯಾತ್ರೆಯನ್ನು ಪೂರ್ಣಗೊಳಿಸಿಕೊಳ್ಳುತ್ತಾನೆ . ಆತ್ಮಿಕ ಪರಿಣತಿಯೊಡನೆ ಕೂಡಿರುವ ಕಾರಣದಿಂದ ಗುಣಸ್ಥಾನಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ . ನಾವು ನಮ್ಮ ಬುದ್ಧಿಯಿಂದ ಈ ಗುಣಸ್ಥಾನಗಳನ್ನು ಗುರುತಿಸಲು ಸಾಧ್ಯವಿಲ್ಲ . ಇವುಗಳನ್ನು ತಮ್ಮ ಅನುಭವದಿಂದಲೇ ತಿಳಿಯುವುದು ಸಾಧ್ಯವಾಗುತ್ತದೆ . ಈ ಗುಣಸ್ಥಾನಗಳು ಪ್ರಾಪ್ತವಾದಾಗ ಮೇಲೆ ಹೇಳಿದ ಗುಣಗಳು ನಮ್ಮ ಆಚರಣೆಯಲ್ಲಿ ಆವಶ್ಯಕವಾಗಿ ಬರುತ್ತವೆ ಎಂದು ಮಾತ್ರ ಹೇಳಬಹುದು . ಈ ಆಚರಣೆಯ ಆಧಾರದ ಮೇಲೆಯೇ ಗುಣಸ್ಥಾನಗಳ ಅನುಮಾನವನ್ನು ಮಾಡಬಹುದಾಗಿದೆ . ನಮ್ಮ ಭಾವಗಳ ಏರಿಳಿತಗಳಿಗೆ ಅನುಸಾರವಾಗಿ ಇವುಗಳಲ್ಲಿ ಕ್ಷಣ ಕ್ಷಣವೂ ಪರಿವರ್ತನೆ ಆಗುತ್ತಿರುತ್ತದೆ . ಇವುಗಳಲ್ಲಿ ಆರೋಹಣೆ ಮತ್ತು ಅವರೋಹಣೆಯೂ ಸಹ ಒಂದು ನಿಶ್ಚಿತ ರೂಪದಿಂದ ಆಗುತ್ತಿರುತ್ತದೆ ಅದು ಈ ಪ್ರಕಾರವಾಗಿದೆ -

* #ಗತಿಗಳ_ಅಪೇಕ್ಷೆಯಿಂದ_ಗುಣಸ್ಥಾನ*

ನರಕ ಮತ್ತು ದೇವಗತಿಯ ಜೀವರು ಪ್ರಥಮದಿಂದ ನಾಲ್ಕನೆಯ ಗುಣಸ್ಥಾನವನ್ನು ಪ್ರಾಪ್ತಮಾಡಿಕೊಳ್ಳಬಲ್ಲರು . ಅದಕ್ಕಿಂತ ಹೆಚ್ಚಿನ ( ಮೇಲಿನ ) ಗುಣಸ್ಥಾನಗಳನ್ನು ಪ್ರಾಪ್ತಮಾಡಿಕೊಳ್ಳುವ ಪಾತ್ರತೆ ಅವರಲ್ಲಿ ಇಲ್ಲ . ತೀರ್ಯಂಚರಲ್ಲಿ ಏಕೇಂದ್ರಿಯ , ವಿಕಲೇಂದ್ರಿಯ ಮತ್ತು ಅಸಂಜ್ಞೀ ಪಂಚೇಂದ್ರಿಯ ಜೀವರಲ್ಲಿ ಒಂದೇ ಪ್ರಥಮ ಗುಣಸ್ಥಾನವಿರುತ್ತದೆ . ಮನವಿಲ್ಲದಿರುವ ಕಾರಣದಿಂದ ಇವುಗಳು ಮೇಲಿನ ಗುಣಸ್ಥಾನಗಳನ್ನು ಪ್ರಾಪ್ತಮಾಡಿಕೊಳ್ಳಲಾರವು . ಸಂಜ್ಞೀ ಪಂಚೇಂದ್ರಿಯ ತಿರ್ಯಂಚಗಳು ದೇಶ ಸಂಯಮವನ್ನು ಪ್ರಾಪ್ತಮಾಡಿಕೊಳ್ಳಬಲ್ಲವು . ಆದ್ದರಿಂದ ಅವುಗಳು ಪ್ರಥಮದಿಂದ ಪಂಚಮ ಗುಣಸ್ಥಾನದ ತನಕ ಇರುತ್ತವೆ . ಮನುಷ್ಯರು ತಮ್ಮ ಆತ್ಮನನ್ನು ಪರಿಪೂರ್ಣವಾಗಿ ವಿಕಾಸಮಾಡಿಕೊಳ್ಳಬಲ್ಲರು , ಆದ್ದರಿಂದ ಮನುಷ್ಯರಲ್ಲಿ‌ ಎಲ್ಲ ಗುಣಸ್ಥಾನಗಳು ಕಂಡುಬರುತ್ತವೆ. ವರ್ತಮಾನ ಕಾಲದಲ್ಲಿ ಭರತ ಕ್ಷೇತ್ರದ ಮನುಷ್ಯರು ಏಳನೇ ಗುಣಸ್ಥಾನದಿಂದ ಮೇಲೆ ಹೋಗಲಾರವು. ಏಕೆಂದರೆ ವರ್ತಮಾನದಲ್ಲಿ‌ ಉತ್ತಮ ಸಂಹನನ ಅಭಾವವಿದೆ.

* #ಮುಂದುವರೆಯುತ್ತದೆ.....*
( ಆಧಾರ - ಜೈನ ತತ್ತ್ವ ವಿದ್ಯಾ ).

22/09/2022

* #ಭಕ್ತಾಮರ_ಸ್ತೋತ್ರ*
( ಶ್ರೀ ಮಾನತುಂಗಾಚಾರ್ಯ ದೇವ ವಿರಚಿತ )
ಭಾಗ - 9

ಸರ್ವಜ್ಞನಾಮಗ್ರಹಣವೇ ವಿಘ್ನಹರವು

*ಆಸ್ತಾಂ ತವ ಸ್ತವನಮಸ್ತ ಸಮಸ್ತ ದೋಷಂ |*
*ತ್ವತ್ಸಂಕಥಾಪಿ ಜಗತಾಂ ದುರಿತಾನಿ ಹಂತಿ |*
*ದೂರೇ ಸಹಸ್ರ ಕಿರಣಃ ಕುರುತೇ ಪ್ರಭೈವ |*
*ಪದ್ಮಾಕರೇಷು ಜಲಜಾನಿ ವಿಕಾಸಭಾಂಜಿ* || ೯ ||

* #ಅನ್ವಯಾರ್ಥ* – ಆಸ್ತಸಮಸ್ತದೋಷ = ಸಮಸ್ತ ಪಾಪವನ್ನು ನಾಶಮಾಡಿದ, ತವಸ್ತವನಂ ನಿಮ್ಮ ಸ್ತೋತ್ರವು , ಆಸ್ತಾಂ = ಇರಲಿ , ತ್ವತ್ಸಂಕಥಾಪಿ = ನಿಮ್ಮ ಕಥೆಯು ಸಹ , ಜಗತಾಂ = ಲೋಕದ , ದುರಿತಂ = ಪಾಪವನ್ನು , ನಿಹಂತಿ = ನಾಶಪಡಿಸುತ್ತದೆ, ಸಹಸ್ರಕರಣಃ = ಸೂರ್ಯನು , ದೂರ = ಬಹುದೂರದಲ್ಲಿ , ಪ್ರಭೈವ ಕುರುತೇ = ಬೆಳಕನ್ನು ನೀಡುತ್ತಾನೆ, ಪದ್ಮಾಕರೇಷು = ತಾವರೆ ಕೊಳಗಳಲ್ಲಿ ಕಿಂ = ಏನು ? ವಿಕಾಸಭಾಂಜಿ = ತಾವರ ಹೂಗಳು ಅರಳುವುದಿಲ್ಲವೇ ?

* #ಭಾವಾರ್ಥ* ಸೂರ್ಯನು ಕಾಂತಿಪೂರ್ಣವಾದ ತನ್ನ ಕಿರಣಗಳನ್ನು ಲೋಕದಲ್ಲಿ ಎಲ್ಲೆಡೆ ಹರಡಿ ಬೆಳಕನ್ನುಂಟು ಮಾಡುವುದು ಜೊತೆಗೆ ಹೂವುಗಳನ್ನು ಅರಳಿಸುತ್ತಾನೆ. ಅದರಂತೆ ನಿಮ್ಮ ಸ್ತೋತ್ರದಿಂದ ಎಲ್ಲಾ ವಿಧವಾದ ದೋಷಗಳೂ ನಾಶವಾಗುವುದರ ಜೊತೆಗೆ ನಿಮ್ಮ ಕಥೆಯು ಕೂಡ ಪಾಪಗಳನ್ನು ಹೋಗಲಾಡಿಸುತ್ತದೆ.

* #ಮುಂದುವರೆಯುತ್ತದೆ...*

* #ಭಕ್ತಾಮರ_ಸ್ತೋತ್ರ*( ಶ್ರೀ ಮಾನತುಂಗಾಚಾರ್ಯ ದೇವ ವಿರಚಿತ )ಭಾಗ - 11ಜಿನದರ್ಶನ ಫಲ *ದೃಷ್ಟ್ವಾ ಭವಂತಮನಿಮೇಷ ವಿಲೋಕನೀಯಂ ।**ನಾನ್ಯತ್ರ ತೋಷಮು...
21/09/2022

* #ಭಕ್ತಾಮರ_ಸ್ತೋತ್ರ*
( ಶ್ರೀ ಮಾನತುಂಗಾಚಾರ್ಯ ದೇವ ವಿರಚಿತ )
ಭಾಗ - 11
ಜಿನದರ್ಶನ ಫಲ

*ದೃಷ್ಟ್ವಾ ಭವಂತಮನಿಮೇಷ ವಿಲೋಕನೀಯಂ ।*
*ನಾನ್ಯತ್ರ ತೋಷಮುಪಯಾತಿ ಜನಸ್ಯ ಚಕ್ಷುಃ |*
ಪೀತ್ವಾ ಪಯಃಶಶಿಕರ ದ್ಯುತಿದುಗ್ಧಸಿಂಧೋಃ |*
*ಕ್ಷಾರಂ ಜಲಂ ಜಲನಿಧೇರಸಿತುಂ ಕ ಇಚ್ಛೇತ್ || ೧೧ ||*

* #ಅನ್ವಯಾರ್ಥ* - ಜನಸ್ಯ = ಜನಗಳ , ಚಕ್ಷುಃ = ನೇತ್ರವು , ಅನಿಮೇಷ ಲೋಕನೀಯಂ = ಎವೆ ( ರೆಪ್ಪೆ ) ಗಳನ್ನು ಮುಚ್ಚದೇ ನೋಡಲು ಯೋಗ್ಯವಾದ, ಭವಂತಂ = ನಿಮ್ಮನ್ನು ದೃಷ್ಟ್ವಾ = ನೋಡಿ , ಅನ್ಯತ್ತತೋಷಂ = ಬೇರೆಯ ಸ್ಥಳದಲ್ಲಿ ಸಂತೋಷವನ್ನು , ನೋಪಯಾತಿ = ಹೊಂದುವುದಿಲ್ಲ , ದುಗ್ಧಸಿಂಧೋಃ = ಕ್ಷೀರಸಮುದ್ರದ , ಶಶಿಕರದ್ಯುತಿ = ಚಂದ್ರಕಾಂತಿಯಂತೆ ಬೆಳ್ಳಗಿರುವ , ಪಯಃ = ನೀರನ್ನು , ಪೀತ್ವಾ = ಕುಡಿದು , ಜಲನೀಧೇಃ = ಸಮುದ್ರದ, ಕ್ಷಾರಂಜಲಂ = ಉಪ್ಪು ನೀರನ್ನು, ಅಶಿಶುಂ = ಕುಡಿಯಲು , ಕಃ = ಯಾವನು , ಇಚ್ಛೆತ್ = ಬಯಸುವನು ?

* #ಭಾವಾರ್ಥ* - ನಿಮ್ಮನ್ನು ನೋಡುವಾಗ ಕಣ್ಣು ರೆಪ್ಪೆಗಳನ್ನು ಮುಚ್ಚದೆ ನಿರಂತರ ನೋಡಬೇಕೆಂಬ ಸಂತೋಷವಾಗುತ್ತದೆ . ಬೇರೆ ಎಲ್ಲೂ ಇಂತಹ ಸಂತೋಷ ನಮಗೆ ಲಭಿಸುವುದಿಲ್ಲ . ಚಂದ್ರನ ಕಿರಣಗಳಿಂದ ಆಚ್ಛಾದಿತವಾಗಿರುವ ಕ್ಷೀರಸಮುದ್ರದ ಹಾಲನ್ನು ಕುಡಿದವನು ಉಪ್ಪು ನೀರನ್ನು ಕುಡಿಯಲು ಬಯಸುವನೇ ? ( ಬಯಸುವುದಿಲ್ಲವೆಂದು ಭಾವವು ) ಉಮಾಸ್ವಾಮಿಗಳು ಸಹ ಭಗವಜ್ಜಿನೇಂದ್ರರನ್ನು ನೋಡುವಾಗ ಆಗುವಷ್ಟು ಆನಂದವು ಬೇರೆ ಯಾರ ದರ್ಶನದಿಂದಲೂ ಆಗುವುದಿಲ್ಲವೆಂದು ಹೇಳಿದ್ದಾರೆ .

* #ಮುಂದುವರೆಯುತ್ತದೆ...*

Address

Bangalore

Website

Alerts

Be the first to know and let us send you an email when GandhaKuti - ಗಂಧಕುಟಿ - गंधकुटी posts news and promotions. Your email address will not be used for any other purpose, and you can unsubscribe at any time.

Share