27/12/2024
ಸನಾತನ ಸಂಸ್ಕೃತಿ # ನಾಗೇಂದ್ರ ಸಿಂಹ
ತಿಮ್ಮರಾಯ ಸ್ವಾಮಿ ಬೆಟ್ಟ, ಆವತಿ
ಸುಮಾರು 800 ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಶ್ರೀ ಕ್ಷೇತ್ರದ ತಿಮ್ಮರಾಯ ಸ್ವಾಮಿ ದೇವಾಲಯವನ್ನು ಸಪ್ತ ಋಷಿಗಳು ನಿರ್ಮಿಸಿದರೆಂದು ಇತಿಹಾಸ ಹೇಳುತ್ತದೆ. ಗೌತಮ ಮಹರ್ಷಿಗಳಿಂದ ಸ್ವಾಮಿಯ ಮೂರ್ತಿ ಪ್ರತಿಷ್ಠಾಪಿಸಿದ್ದರಿಂದ ಈ ಕ್ಷೇತ್ರವನ್ನು ಗೌತಮ ಗಿರಿಯಂತಲೂ ಕರೆಯಲಾಗುತ್ತದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮಾಡಲಾಗದವರು ಈ ಕ್ಷೇತ್ರಕ್ಕೆ ಬಂದು ಸ್ವಾಮಿಯ ದರ್ಶನ ಪಡೆದರೆ ತಿಮ್ಮಪ್ಪನ ದರ್ಶನ ಪಡೆದಷ್ಟೇ ಪುಣ್ಯ ಪ್ರಾಪ್ತಿ ಯಾಗುತ್ತದೆಂದು ಇತಿಹಾಸ ಹೇಳುತ್ತದೆ.
ಧರ್ಮೊ ರಕ್ಷತಿ: ರಕ್ಷಿತ: