29/10/2023
ನಿನ್ನೆ ಕಲಬುರ್ಗಿ ನಗರದ ಹೊರವಲಯ ಸೇಡಂ ರಸ್ತೆಯಲ್ಲಿರುವ ಬುದ್ಧ ವಿಹಾರದಲ್ಲಿ ಇಂಡೋನೇಷಿಯಾದಿಂದ ತಂದ ಬುದ್ಧರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು.
ಈ ಪ್ರತಿಮೆಯನ್ನು ರಾಮನ ಪಾತ್ರಧಾರಿಯಾಗಿ ಹಾಗೂ ಬುದ್ಧನಾಗಿಯೂ ನಟಿಸಿದ ನಟ ಗಗನ್ ಮಲ್ಲಿಕ್ ಕೊನೆಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡು 84000 ಬುದ್ಧರ ಪ್ರತಿಮೆಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದಾರೆ. ಇಂದು ಬೌದ್ಧ ವಿಹಾರಕ್ಕೆ ಈ ಪ್ರತಿಮೆಯನ್ನು ಸಮರ್ಪಿಸಿದರು.
ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುವಾಗಿದ್ದವರು. ಡಾ. ಮಲ್ಲಿಕಾರ್ಜುನ ಖರ್ಗೆಜಿ ದಂಪತಿಗಳು ಮತ್ತವರ ಸುಪುತ್ರ ರಾಹುಲ್ ಖರ್ಗೆ. ದೇಶ - ವಿದೇಶಗಳ ಅನೇಕ ಗಣಮಾನ್ಯರು, ಬೌದ್ಧ ಭಿಕ್ಕುಗಳು, ಕಲಬುರ್ಗಿ ಜಿಲ್ಲೆಯ ಶಾಸಕರು, ಬೌದ್ಧ ಉಪಾಸಕರು ಸಂಭ್ರಮದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಗಗನ್ ಮಲ್ಲಿಕ್ ರವರ ಮಾತುಗಳು ಎಲ್ಲರ ಮನಸೂರೆಗೊಂಡವು. ದಕ್ಷಿಣ ಭಾರತದ ಪ್ರಸಿದ್ಧ ಮತ್ತು ಆಕರ್ಷಣೀಯವಾಗಿ ಬುದ್ಧ ವಿಹಾರ ಕಂಗೊಳಿಸುತ್ತಿದೆ, ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ, ಇದಕ್ಕೆ ಮನಸೋಲದವರೇ ಇಲ್ಲ. ಇದನ್ನು ಕಲಬುರ್ಗಿಯ ಜನತೆಗೆ ಕೊಡುಗೆಯಾಗಿ ನೀಡಿದ ಡಾ: ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಜೈ ಭೀಮ್ ಅಭಿನಂದನೆಗಳು... 💙