Sri Ullalthi Panchalingeshwara Sannidhi Billampadavu

  • Home
  • India
  • Alike
  • Sri Ullalthi Panchalingeshwara Sannidhi Billampadavu

Sri Ullalthi Panchalingeshwara Sannidhi Billampadavu Contact information, map and directions, contact form, opening hours, services, ratings, photos, videos and announcements from Sri Ullalthi Panchalingeshwara Sannidhi Billampadavu, Hindu temple, Billampadavu, Alike.

28/12/2023
08/07/2022

ವಿಟ್ಲ: ಬಿಲ್ಲಂಪದವು ಬದಿ ಅಡ್ಕದಲ್ಲಿರುವ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಮೂಲ ಸನ್ನಿಧಿಯಲ್ಲಿ ವಿಟ್ಲ ಸೀಮೆಯ ತಂತ್ರಿವರ್ಯರಾದ ಉಳ.....

ಬಿಲ್ಲಂಪದವು ಬದಿ ಅಡ್ಕದಲ್ಲಿರುವ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಮೂಲ ಸನ್ನಿಧಿಯ ಮೇಲೆ ಶತ ಶತಮಾನ ಪೂರೈಸಿದ ಮಾವಿನ ಮರ 24-04-2022ರಂದು ಏಕಾಏಕ...
25/04/2022

ಬಿಲ್ಲಂಪದವು ಬದಿ ಅಡ್ಕದಲ್ಲಿರುವ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಮೂಲ ಸನ್ನಿಧಿಯ ಮೇಲೆ ಶತ ಶತಮಾನ ಪೂರೈಸಿದ ಮಾವಿನ ಮರ 24-04-2022ರಂದು ಏಕಾಏಕಿ ಬಿದ್ದು ತೀವ್ರ ಹಾನಿಯಾಗಿದೆ. ಛಾವಣಿ ಹಾನಿಯಾದರೂ ದೈವ ಸಾನಿಧ್ಯಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ. ವಿಟ್ಲ ಸೀಮೆಯ ತಂತ್ರಿವರ್ಯರಾದ ಉಳಿಯತ್ತಾಯ ವಿಷ್ಣು ಆಸ್ರ ಅವರ ಮಾರ್ಗದರ್ಶನದಲ್ಲಿ ಮುಂದಿನ ಕೆಲಸ ಕಾರ್ಯಗಳು ನಡೆಯಲಿದೆ..

ಬಿಲ್ಲಂಪದವು ಬದಿ ಅಡ್ಕ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಸನ್ನಿಧಿಯ ಜೀರ್ಣೊದ್ಧಾರ ಕಾರ್ಯದ ಅಂಗವಾಗಿ ನಡೆದ ಸ್ಥಳ ಪ್ರಶ್ನೆಯಂತೆ ವಿಟ್ಲ ಸೀಮೆಯ ತಂ...
05/12/2020

ಬಿಲ್ಲಂಪದವು ಬದಿ ಅಡ್ಕ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಸನ್ನಿಧಿಯ ಜೀರ್ಣೊದ್ಧಾರ ಕಾರ್ಯದ ಅಂಗವಾಗಿ ನಡೆದ ಸ್ಥಳ ಪ್ರಶ್ನೆಯಂತೆ ವಿಟ್ಲ ಸೀಮೆಯ ತಂತ್ರಿವರ್ಯರಾದ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಪುನರ್ ಅನುಜ್ಞಾ ಕಲಶವನ್ನು 2017 ಫೆಬ್ರವರಿ 22ರಂದು ನಡೆಸಿ, ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು..

ಬಿಲ್ಲಂಪದವು ಬದಿ ಅಡ್ಕದಲ್ಲಿ ಅಜೀರ್ಣಗೊಂಡ ಗುಡಿಗಳ ರೀತಿಯಲ್ಲಿ ಉಳ್ಳಾಲ್ತಿ, ಮಲರಾಯಿ, ದೂಮಾವತಿ ಮತ್ತು ಪಿಲಿಚಾಮುಂಡಿ - ಗುಳಿಗನ ಸಾನಿಧ್ಯವಿತ್ತು...
05/12/2020

ಬಿಲ್ಲಂಪದವು ಬದಿ ಅಡ್ಕದಲ್ಲಿ ಅಜೀರ್ಣಗೊಂಡ ಗುಡಿಗಳ ರೀತಿಯಲ್ಲಿ ಉಳ್ಳಾಲ್ತಿ, ಮಲರಾಯಿ, ದೂಮಾವತಿ ಮತ್ತು ಪಿಲಿಚಾಮುಂಡಿ - ಗುಳಿಗನ ಸಾನಿಧ್ಯವಿತ್ತು. ವಿಟ್ಲ ಅರಮನೆಯ ಕಾರ್ಯಸ್ಥರಾಗಿದ್ದ ಬಿಲ್ಲಂಪದವು ನಾರಾಯಣ ಭಟ್ಟ ಅವರು ಆ ಸ್ಥಳದ ಬಗ್ಗೆ ಜೋತಿಷ್ಯ ಚಿಂತನೆ ನಡೆಸಿ ಜೀರ್ಣೋದ್ಧಾರ ನಡೆಸುವ ಉದ್ದೇಶದಿಂದ 1971 ಸೆಪ್ಟೆಂಬರ 22ರಂದು ಬಿಲ್ಲಂಪದವು ಮೂಲ ಮನೆಯಲ್ಲಿ ಅಷ್ಟಮಂಗಲ ಮುಹೂರ್ತಗೊಂಡು, 1971 ಅಕ್ಟೋಬರ್ 9 ರಿಂದ ಅಕ್ಟೋಬರ್ 12 ರವರೆಗೆ ಎಂ. ಕೃಷ್ಣ ಭಟ್ಟ ಹಾಗೂ ಎಂ. ಶೇಖರನ್ನಾಯರ್ ಅವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಿದರು. ಈ ಸಂದರ್ಭದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನ ಹಾಗೂ ಪರಿವಾರ ದೈವಗಳ ಮೂಲ ಸ್ಥಾನ ಎಂಬ ಬಗ್ಗೆ ತಿಳಿದು ಬಂದಿರುತ್ತದೆ. ಪಾರಂಪರಾ ತಂತ್ರಿಗಳಾದ ಉಳಿಯತ್ತಾಯರ ನೇತೃತ್ವದಲ್ಲಿ 1971ರ ಅಕ್ಟೋಬರ್ 29 ರಂದು ಅನುಜ್ಞಾ ಕಲಶ, 31ರಂದು ಮರ ಕಡಿದು ಕೆಲಸ ಆರಂಭವಾಗಿ, ನವೆಂಬರ್ ನಲ್ಲಿ ಪಾದುಕಾ ಇಡಲಾಯಿತು. ಅಳಿಕೆ ಪಂಚಾಯಿತಿಗೆ ಜೀರ್ಣೋದ್ಧಾರದ ವಿಚಾರದಲ್ಲಿ ಕಟ್ಟಡ ದುರಸ್ತಿಗಾಗಿ 1972 ಜನವರಿ 13ಕ್ಕೆ ಅರ್ಜಿ ಸಲ್ಲಿಸಿದ್ದು, ಫೆಬ್ರವರಿ 21ಕ್ಕೆ ಪರವಾನಗಿ ನೀಡಲಾಗಿದೆ. 1974 ಮೇ 5ರಂದು ಬಿಲ್ಲಂಪದವು ನಾರಾಯಣ ಭಟ್ಟ ಅವರ ನಿಧನದ ಹಿನ್ನಲೆಯಲ್ಲಿ ಕೆಲಸ ಸ್ಥಗಿತವಾಯಿತು. ಬಿಲ್ಲಂಪದವು ಬದಿ ಅಡ್ಕ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಸನ್ನಿಧಿಯ ಸ್ಥಗಿತವಾದ ಕೆಲಸವನ್ನು ಬಿಲ್ಲಂಪದವು ನಾರಾಯಣ ಭಟ್ಟ ಅವರ ಕೊನೆಯ ಪುತ್ರ ಬಿ. ನಾರಾಯಣ ಭಟ್ಟ ಅವರು ಮುಂದುವರಿಸಲು ಮುಂದಾದರು. ಅದರಂತೆ ಮಾಡಾವು ವೆಂಕಟ್ರಮಣ ಜೋಯಿಸರು 2016 ಅಕ್ಟೋಬರ್ 22ರಂದು ಸ್ಥಳ ಪ್ರಶ್ನೆ ನಡೆಸಿದರು. ಹಿಂದೆ ನಡೆಸಿದ ಅನುಜ್ಞಾಕಲಶದ ಅವಧಿ ಮುಗಿದಿದ್ದ ಹಿನ್ನಲೆಯಲ್ಲಿ ಪುನರ್ ಅನುಜ್ಞಾ ಕಲಶ ನಡೆಸಿ, ಹಿಂದೆ ನಿರ್ಮಾಣವಾದ ಕಟ್ಟಡದಲ್ಲೇ ಪ್ರತಿಷ್ಠೆ ನಡೆಸಬಹುದು ಎಂಬ ಬಗ್ಗೆ ಈ ಸಂದರ್ಭ ಕಂಡು ಬಂತು..

ಕೇಪು ಉಳ್ಳಾಲ್ತಿ ದೈವಸ್ಥಾನದಲ್ಲಿ 2020 ಅಕ್ಟೋಬರ್ 13ರಂದು ಬೆಳಿಗ್ಗೆ ಬೆಳಕಿಗೆ ಬಂದ ಕಳ್ಳತನ ಪ್ರಕರಣದ ಬಳಿಕದ ತುಲಾ ಮಾಸ ಸಂಕ್ರಮಣದ ದಿನ (2020 ...
10/11/2020

ಕೇಪು ಉಳ್ಳಾಲ್ತಿ ದೈವಸ್ಥಾನದಲ್ಲಿ 2020 ಅಕ್ಟೋಬರ್ 13ರಂದು ಬೆಳಿಗ್ಗೆ ಬೆಳಕಿಗೆ ಬಂದ ಕಳ್ಳತನ ಪ್ರಕರಣದ ಬಳಿಕದ ತುಲಾ ಮಾಸ ಸಂಕ್ರಮಣದ ದಿನ (2020 ಅಕ್ಟೋಬರ್ 17) ಬಿಲ್ಲಂಪದವು ಬದಿ ಅಡ್ಕ ಶ್ರೀ ಉಳ್ಳಾಲ್ತಿಪಂಚಲಿಂಗೇಶ್ವರ ಸನ್ನಿಧಿಯ ಮೂಲ ಸ್ಥಾನದಲ್ಲಿ ಶ್ರೀ ಮಲರಾಯಿ ದೈವದ ಆಯುಧ ಭೂಸ್ಪರ್ಷವಾಗಿದ್ದು ಗೋಚರಿಸಿದ ಕಾರಣಕ್ಕೆ 2020 ನವೆಂಬರ್ 9ರಂದು ವಿಟ್ಲ ಸೀಮೆಯ ತಂತ್ರಿವರ್ಯರಾದ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಶುದ್ದಿ ಕಾರ್ಯ ನಡೆಸಿ, ಗಣಪತಿ ಹವನ ಹಾಗೂ ವಿಶೇಷ ತಂಬಿಲ ಸೇವೆ ಕೋವಿಡ್ - 19 ನಿಯಮಗಳ ಪ್ರಕಾರ ನಡೆಸಲಾಯಿತು.

Address

Billampadavu
Alike
574235

Telephone

9449663805

Website

Alerts

Be the first to know and let us send you an email when Sri Ullalthi Panchalingeshwara Sannidhi Billampadavu posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Ullalthi Panchalingeshwara Sannidhi Billampadavu:

Share

Category