01/01/2026
💐 ಶ್ರೀ ಆರಾಧನಾ ಸನ್ನಿಧಿ 💐
ಶ್ರೀ ಮಹಾದೇವಿ ನಾಗದುರ್ಗಾಪರಮೇಶ್ವರಿ ಅಮ್ಮನವರ ದಿವ್ಯ ದರ್ಶನ
🗓️ ದಿನಾಂಕ: 01-01-2026 ಗುರುವಾರ
✨ ತಿಥಿ: ಶುಕ್ಲ ತ್ರಯೋದಶಿ | ನಕ್ಷತ್ರ: ರೋಹಿಣಿ
ಸಂಖ್ಯಾ ಬದಲಾವಣೆಯ ಈ ಶುಭ ಮುಂಜಾವಿನಲ್ಲಿ...
ಕಾಲಚಕ್ರದ ಉರುಳುವಿಕೆಯಲ್ಲಿ ಇಂದು ಇಂಗ್ಲಿಷ್ ಕ್ಯಾಲೆಂಡರ್‌ನ ಅಂಕಿಗಳು ಬದಲಾಗಿವೆ. ಸನಾತನ ಧರ್ಮದ ಪ್ರಕಾರ ನಮಗೆ "ಯುಗಾದಿ" ನಿಜವಾದ ಹೊಸ ವರ್ಷವಾದರೂ, ಲೋಕದ ವ್ಯವಹಾರಕ್ಕಾಗಿ ಒಪ್ಪಿಕೊಂಡ ಈ ಬದಲಾವಣೆಯ ದಿನವನ್ನೂ ಆ ತಾಯಿಯ ಪಾದಕ್ಕೆ ಅರ್ಪಿಸೋಣ.
ವ್ಯವಹಾರಿಕವಾಗಿ: ಈ ಹೊಸ ವರ್ಷ (2026) ನಿಮ್ಮ ಬದುಕಿನಲ್ಲಿ ಸಮೃದ್ಧಿ ತರಲಿ.
ಆಧ್ಯಾತ್ಮಿಕವಾಗಿ: ನಮ್ಮ ಸಂಪ್ರದಾಯದ ನೈಜ ಹೊಸ ವರ್ಷವಾದ ಯುಗಾದಿಯವರೆಗೆ ಕಾಯುತ್ತಾ, ಅಲ್ಲಿಯವರೆಗೆ ತಾಯಿಯ ಸನ್ನಿಧಿಯಲ್ಲಿ ಭಕ್ತಿಯ ದೀಪ ಬೆಳಗೋಣ ಅಂತೆಯೇ ಹೃದಯ ಸ್ಥಾನದ ಬೆಳಕು ದಿವ್ಯತೆಯಲ್ಲಿ ಆರಾಧಿಸೋಣ
ನಂಬಿಕೆಯಿಟ್ಟವರಿಗೆ ಮಡಿಲಾಗುವ, ಕಷ್ಟವೆಂದವರಿಗೆ ಕಾಯುವ ಜಗನ್ಮಾತೆಯ ಆಶೀರ್ವಾದದೊಂದಿಗೆ ನಿಮ್ಮ ಪ್ರತಿ ಹೆಜ್ಜೆಯೂ ಸುಖಮಯವಾಗಲಿ
🌹 ಲೋಕಾಃ ಸಮಸ್ತಾಃ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು 🌹
|| ಜೈ ಶಿವಶಕ್ತಿಯೇ ನಮಃ ||