10/06/2026
ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅನ್ನದಾನ ಸಮಿತಿಗೆ ಪುನರಾಯ್ಕೆಯಾದ ಪೂಜ್ಯ ಶ್ರೀ ಟಿ. ಬಿ. ಶೇಖರ್ ಜೀ ರವರಿಗೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.
ತಾವು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ (SASS) ರಾಷ್ಟ್ರೀಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದು, ಅಯ್ಯಪ್ಪ ಸ್ವಾಮಿಯ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಸಾವಿರಾರು ಸೇವಕರಿಗೆ ಪ್ರೇರಣೆಯಾಗಿ ನಿಂತಿದ್ದೀರಿ.
ಧಾರ್ಮಿಕ ಮೌಲ್ಯಗಳು ಮತ್ತು ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿರುವ ತಾವು, SASSನ ಎಲ್ಲಾ ಸೇವಕರಿಗೂ ಆದರ್ಶ ವ್ಯಕ್ತಿತ್ವವಾಗಿದ್ದು, ನಿಮ್ಮ ನಾಯಕತ್ವ, ಸೇವಾ ಮನೋಭಾವ ಹಾಗೂ ಸಮರ್ಪಣೆ ಎಲ್ಲರಿಗೂ ಮಾರ್ಗದರ್ಶನವಾಗಿದೆ.
ಭಗವಾನ್ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪಾಶೀರ್ವಾದ ಸದಾ ತಮ್ಮ ಮೇಲಿದ್ದು, ತಮಗೆ ಉತ್ತಮ ಆರೋಗ್ಯ, ಆಯುರಾರೋಗ್ಯ ಹಾಗೂ ಇನ್ನಷ್ಟು ಸಮಾಜಸೇವೆ ಮಾಡುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇವೆ.
ಸ್ವಾಮಿ ಶರಣಂ ಅಯ್ಯಪ್ಪ.
– ಉಡುಪಿ ಜಿಲ್ಲಾ ಘಟಕ
ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ