Jai Bhajarangi

Jai Bhajarangi Anjaneya or Hanuman is a Hindu god, who was an ardent devotee of Rama according to the Hindu legends. He is a central character in the Indian epic Ramayana

ಹನುಮಂತ ,ಆಂಜನೇಯ -
ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ, ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನ

ಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ,ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಪರ್ಯಾಯ ಪದಗಳು:-
ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ, ಹನುಮ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ. ಕೇಸರಿ ನಂದನ, ಹನುಮಂತ, ರಾಮದೂತ,ದಾಸರಲ್ಲಿ ಶ್ರೇಷ್ಟ. ಭಕ್ತ ಅನಜನೆಯ ಮಾರುತಿ ,ಪವನಪುತ್ರ, ಸು೦ದರ, ವಾಯುಪುತ್ರ , ರಾಮಪ್ರಿಯ, ಹನುಮ೦ತ, ಅ೦ಜನೆಯ ,ವಾನರಶ್ರೆಷ್ತೆ, ಕೆಸರಿ ನ೦ದನ , ಅಂಜನಸುತ,

ಯಂತ್ರೋದ್ಧಾರಕ ಹನೂಮತ್ತ್ಸೋತ್ರಮ್ (ಶ್ರೀ ವ್ಯಾಸತೀರ್ಥ ವಿರಚಿತ):-

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್ |
ಪೀನವೃತ್ತ-ಮಹಾಬಾಹುಂ ಸರ್ವಶತ್ರು-ನಿವಾರಣಮ್ || ೧ ||

ನಾನಾರತ್ನ-ಸಮಾಯುಕ್ತ-ಕುಂಡಲಾದಿ-ವಿರಾಜಿತಮ್ |
ಸರ್ವದಾಽಭೀಷ್ಟ-ದಾತಾರಂ ಸತಾಂ ವೈ ದೃಢಮಾಹವೇ || ೨ ||

ವಾಸಿನಂ ಚಕ್ರತೀರ್ಥಸ್ಯ ದಕ್ಷೀಣಸ್ಥಗಿರೌ ಸದಾ |
ತುಂಗಾಂಭೋಧಿತರಂಗಸ್ಯ ವಾತೇನ ಪರಿಶೋಭಿತೆ || ೩ ||

ನಾನಾದೇಶಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ |
ಧೂಪದೀಪಾದಿ-ನೈವೇದ್ಯೈಃ ಪಂಚಖಾದ್ಯೈಶ್ಚಶಕ್ತಿತಃ || ೪ ||

ಭಜಾಮಿ ಶ್ರೀಹನೂಮಂತಂ ಹೇಮಕಾಂತಿ-ಸಮಪ್ರಭಮ್ |
ವ್ಯಾಸತೀರ್ಥಯತೀಂದ್ರೇಣ ಪೂಜಿತಂ ಚ ವಿಧಾನತಃ || ೫ ||

Address

Shorapur
585224

Telephone

8884936007

Website

http://jaihanumanjipage.blogspot.in/

Alerts

Be the first to know and let us send you an email when Jai Bhajarangi posts news and promotions. Your email address will not be used for any other purpose, and you can unsubscribe at any time.

Share

Category