31/07/2026
ಲೋಕಕಲ್ಯಾಣಕ್ಕಾಗಿ ಧರ್ಮ ಜಾಗೃತಿಗಾಗಿ
*ಶಿವಮೊಗ್ಗ ಜಿಲ್ಲೆ ಸುಕ್ಷೇತ್ರ ದುಗ್ಗಿ ಮತ್ತು ತಪೋಕ್ಷೇತ್ರ ಕಡೇನಂದಿಹಳ್ಳಿ
ಶ್ರೀಮದ್ ರಂಭಾಪುರಿ ಶಾಖಾ ಶ್ರೀ ಗುರು ರೇವಣಸಿದ್ದೇಶ್ವರ ಮಠದ
ಶಿವತಪಸ್ವಿ ರತ್ನ, ಸಾಧನ ಸಿರಿ, ಶಿವಪೂಜಾ ತಪೋರತ್ನ, ಶಿವತತ್ವ ಪ್ರಬೋಧಕ
ಶ್ರೀ ಷ|| ಬ್ರ|| ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ
ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮ
ಪ್ರತಿನಿತ್ಯ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಪಾದಪೂಜೆ, ಭಸ್ಮ-ರುದ್ರಾಕ್ಷಿ ಧಾರಣೆ, ಬೆತ್ತು ಶಿವದೀಕ್ಷೆ ವ, ಅಯ್ಯಾಚಾರ ಹಾಗೂ ಶಿವಭಕ್ತರಿಗೆ ಅಂಗಧಾರಣೆ ಮತ್ತು ಧಾರ್ಮಿಕ ಸಮಾರಂಭ
ಪವಿತ್ರ ಶ್ರಾವಣ ಮಾಸ ಪರ್ಯಂತರ ದಿನಾಂಕ: 13-08-2026 ಗುರುವಾರದಿಂದ ದಿನಾಂಕ: 11-09-2026 ಶುಕ್ರವಾರದವರೆಗೆ
ಸದ್ಭಕ್ತ ಬಂಧುಗಳೇ,
ಸಮಾಜ ಬಾಂಧವರು-ಸದ್ಭಕ್ತರುಗಳು ಧರ್ಮದ ಮೂಲ ಪರಂಪರೆ, ಆಚಾರ-ವಿಚಾರ, ಆಚರಣೆಗಳಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಧರ್ಮ-ಸಂಸ್ಕಾರ ನೀಡುವ ಸದುದ್ದೇಶದಿಂದ ಶ್ರೀಗಳವರು ಲೋಕಕಲ್ಯಾಣಕ್ಕಾಗಿ ಮತ್ತು ಧರ್ಮ ಜಾಗೃತಿಗಾಗಿ ನಾಡಿನ ಬೇರೆ ಬೇರೆ ಗ್ರಾಮಗಳ ದೇವಸ್ಥಾನಗಳಲ್ಲಿ ಹಾಗೂ ಸದ್ಭಕ್ತರುಗಳ ಮನೆಗಳಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಪಾದಪೂಜೆ ನೆರವೇರಿಸಿ ಉಪದೇಶ ನೀಡುವರು.
ಜೊತೆಗೆ ಸಮಸ್ತ ಸದ್ಭಕ್ತರಿಗೆ ಭಸ್ಮ-ರುದ್ರಾಕ್ಷಿ ಧಾರಣೆ ಹಾಗೂ ಅಪೇಕ್ಷಿತ ಭಕ್ತರಿಗೆ ಲಿಂಗಧಾರಣೆ ಮತ್ತು ಮಂತ್ರೋಪದೇಶ ಮಾಡುವರು.
ಇಷ್ಟಲಿಂಗ ಪೂಜಾ ಸಮಯ
ಬೆಳಿಗ್ಗೆ 09.00 ರಿಂದ ಮಧ್ಯಾಹ್ನ 01.00 ಗಂಟೆಯವರೆಗೆ
ಲೋಕಕಲ್ಯಾಣಕ್ಕಾಗಿ ಧರ್ಮ ಜಾಗೃತಿಗಾಗಿ ಪೂಜ್ಯರು ಸಂಕಲ್ಪಿಸಿರುವ ಈ ಧರ್ಮಪರ ಕಾರ್ಯಕ್ರಮದಲ್ಲಿ ಸಮಸ್ಥ ಸದ್ಭಕ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು-ಮನ-ಧನ ಶುದ್ಧ ಭಕ್ತಿ ಸೇವೆಯನ್ನು ಸಮರ್ಪಿಸಿ ಗುರು ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
॥ ವ್ಯವಸ್ಥಾಪಕರು ॥
ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ (ರಿ.)
ಸಲಹಾ ಮತ್ತು ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಶ್ರೀ ಮಠದ ಸಮಸ್ತ ಸದ್ಭಕ್ತರುಗಳು, ತಪೋಕ್ಷೇತ್ರ ಕಡೇನಂದಿಹಳ್ಳಿ, ಶಿಕಾರಿಪುರ ತಾಲೂಕು ಮತ್ತು ಸುಕ್ಷೇತ್ರ ದುಗ್ಲಿ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ
#ಇಷ್ಟಲಿಂಗಪೂಜೆ
ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು ಶ್ರೀಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮ ತಪೋ ಕ್ಷೇತ್ರ ಕಡೆನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ - ರಿ.