07/04/2021
[07/04, 11:16 am] Aniketana: ಜಗತ್ತಿನಲ್ಲಿ ಉಪಕಾರವೆನ್ನುವುದು ಬಹಳ ಆವಶ್ಯಕವಾದದ್ದು. ಇಂದು ನಾವು ಉಪಕಾರವನ್ನು ಮಾಡಿದರೆ ನಾಳೆ ನಮಗೂ ಉಪಕಾರವನ್ನು ಮಾಡಲು ಕೈಗಳು ಮುಂದಾಗುವವು. ಏಕೆಂದರೆ ಇಡಿಯಾದ ಪ್ರಪಂಚವೇ ಕರ್ಮದ ಅಡಿಯಲ್ಲಿ ಸಾಗುವಂತಹದ್ದು , ಕರ್ಮವು ಉಚಿತನೋ, ಅನುಚಿತನೋ... ಏನೇ ಇದ್ದರೂ ಅದರ ಭೋಗವು ಅನಿವಾರ್ಯ. ಅಂದಮೇಲೆ, ನಾವು ಉಪಕಾರ ರೂಪವಾದ ಕರ್ಮವನ್ನು ಮಾಡಿದಾಗ... ಅದರ ಪ್ರತಿಫಲವಾಗಿ ನಮಗೂ ಉಪಕಾರ ಮಾಡುವ ಜೀವಿರು ಇದ್ದೇ ಇರುತ್ತಾರೆ.
ನಮ್ಮ ಕಷ್ಟಕಾಲದಲ್ಲಿ ನಮಗೆ ಯಾರೂ ಸಹಾಯ ಮಾಡಲಿಲ್ಲ ಎಂದು ಭಾವಿಸಿ, ನಮ್ಮವರನ್ನು ದೂರವಿಡುತ್ತೇವೆ. ಆದರೆ ವಸ್ತುಸ್ಥಿತಿಯನ್ನು ಅಲೋಚಿಸಿದಾಗ ನಮಗೆ ಅರ್ಥವಾಗುತ್ತದ್ದೆ... ನಾವು ಅವರ ಸಹಾಯವನ್ನು ಪಡೆಯಲು ಯೋಗ್ಯರಲ್ಲ ಎಂದು. ಏಕೆಂದರೆ, ಹಿಂದಿನ ಜನುಮದಲ್ಲಿ ನಾವೂ ಇನ್ನೊಬ್ಬರ ಆಪತ್ತು ವಿಪತ್ತುಗಳನ್ನು ಕಂಡರೂ ಕಾಣದಂತೆ ಇರುತ್ತೇವೆ. ಸಹಾಯಕ್ಕಾಗಿ ಮನಸ್ಸು ಮಾಡುವದಿಲ್ಲ. ಶಾಸ್ತ್ರದಲ್ಲಿ ಒಂದು ಮಾತು ಏನೆಂದರೆ, *कार्येण कारणं अनुमीयते* ಎಂದು. ಇದರ ಅರ್ಥ ಏನೆಂದರೆ, ಕಾರ್ಯದಿಂದ ಕಾರಣವನ್ನು ಅನುಮಾನ ಮಾಡುಬೇಕು ಎಂಬುದಾಗಿ.
ಉದಾ:- ಕುಡಿಯುವ ನೀರು ಸಿಹಿಯಾಗಿದ್ದರೆ... ಆ ಸಿಹಿತನಕ್ಕೆ ಕಾರಣವಾದದ್ದು ಸಕ್ಕರೆಯೆಂದು ತಿಳಿಯುತ್ತೇವೆ. ಹಾಗಾದರೆ, ಕಾರ್ಯವಾದ ಸಿಹಿತನದಿಂದ ಕಾರಣವಾದ ಸಕ್ಕರೆಯ ಅನುಮಾನವನ್ನು ಮಾಡಿದಂತಾಯಿತು. ಹಾಗೆಯೇ, ಇಂದು ನಮ್ಮ ಜೀವನದಲ್ಲಿ ನಮಗೆ ಯಾರು ಸಹಾಯಕರಿಲ್ಲ ಅಂತಾದರೆ, ಅದಕ್ಕೆ ಕಾರಣವಾದದ್ದು ನಾವು ಪೂರ್ವ ಜನುಮದಲ್ಲಿ ಸಹಾಯ ಮಾಡದಿರುವುದು.(ಕಾರ್ಯರೂಪವಾದದ್ದು ನಮಗೆ ಇಂದು ಯಾರೂ ಉಪಕಾರಕರು ಇಲ್ಲದಿರುವುದು. ಕಾರಣವಾದದ್ದು ನಾವು ಪೂರ್ವದಲ್ಲಿ ಜನುಮದಲ್ಲಿ ಇನ್ನೊಬ್ಬರಿಗೆ ಉಪಕಾರ ಮಾಡದಿರುವುದು.) ಹಾಗಾಗಿ ಇಂದು ನಮಗೆ ಯಾರು ಉಪಕಾರಕರು ಇಲ್ಲೆಂದು ಕೊರಗುವದ್ದಕ್ಕಿಂತ... ಉಪಕಾರಕರಿಲ್ಲದಲೇ ಕೊರಗುತ್ತಿರುವವರಿಗೆ ನಾವೇ ಉಪಕಾರಕರಾಗೋಣ.
*Help people, even when you know they can't help you back* ಎಂಬುದಾಗಿ ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ.
ಈ ಮಾತು ನಮ್ಮೆಲ್ಲರಿಗೂ ಅನ್ವಯಿಸುವಂತಹದ್ದು. ಏಕೆಂದರೆ ನಾವು ಯಾರಿಗೆ ಉಪಕಾರ ಮಾಡಿದರೂ ಪ್ರತ್ಯುಪಕಾರವನ್ನು ಬಯಸದೇ ಮಾಡುವದಿಲ್ಲ. ಅಂತೆಯೇ ನಮ್ಮಿಂದ ಉಪಕೃತನಾದವನು ನಮಗೆ ಪ್ರತ್ಯುಪಕಾರವನ್ನು ಮಾಡದಿರುವಾಗ ನಾವು ಅವರಲ್ಲಿ ಸಿಟ್ಟು ಮಾಡುತ್ತೇವೆ. ಅವರು ಮಾಡಿದ್ದು ದ್ರೋಹವೆಂದು ಬಗೆದು ಕೊರಗುತ್ತೇವೆ. ಅದಕ್ಕಾಗಿಯೇ ನಮ್ಮ ಪೂರ್ವಜರಲ್ಲಿರುವ ನೆಮ್ಮದಿ, ಸುಖ ಶಾಂತಿಗಳು ನಮ್ಮಲ್ಲಿ ಕಾಣದಾಗಿವೆ. ಹಾಗಾಗಿ ನಾವೆಲ್ಲರೂ ಪ್ರತ್ಯುಪಕಾರವನ್ನು ಬಯಸಿ ಉಪಕಾರವನ್ನು ಮಾಡಬಾರದು. ಅಷ್ಟೇ ಅಲ್ಲದೇ ಪ್ರತ್ಯುಪಕಾರವನ್ನು ಬಯಸದೇನೇ ಉಪಕಾರವನ್ನು ಮಾಡುವುದು ಶಾಸ್ತ್ರ ವಿಹಿತವೂ ಆಗಿದೆ.
*परोपकाराय फलन्ति वृक्षाः परोपकाराय वहन्ति नद्यः।
परोपकाराय दुहन्ति गावः परोपकारार्थमिदं शरीरम्॥*
ಯಾವ ರೀತಿ ಪರೋಪಕಾರಕ್ಕಾಗಿಯೇ ವೃಕ್ಷಗಳು ಫಲಿಸುತ್ತವೆಯೋ, ನದಿಗಳು ನೀರನ್ನು ಹರಿಸುತ್ತವೆಯೋ, ಆಕಳುಗಳು ಹಾಲನ್ನು ಕೊಡುತ್ತವೆಯೋ... ಅದೇ ರೀತಿಯಾಗಿ ಈ ದೇಹವೂ ಕೂಡಾ ಪರೋಪಕರಾಕ್ಕಾಗಿಯೂ ಮೀಸಲ್ಪಟ್ಟದ್ದು. ಇನ್ನೊಬ್ಬರಿಗೆ ಉಪಕಾರವನ್ನು ಮಾಡುವದರಿಂದ ನಮಗೇನೇ ಒಳಿತು ಆಗುವದಾಗಿದ್ದರೆ, ಆ ಕಾರ್ಯಕ್ಕಾಗಿ ನೂರು ಅಲೋಚನೆಯೇಕೆ...?
*परोपकार: पुण्याय पापाय परपीडनम्* ಎಂಬ ಉಕ್ತಿಯು... ಪರೋಪಕಾರವು ಪುಣ್ಯಕ್ಕೆ ಸಾಧನ, ಪರಪೀಡನವು ಪಾಪ ಸಾಧನವಾಗಿದೆ ಎಂದು ಹೇಳುತ್ತದೆ. ವಿಚಿತ್ರವೇನೆಂದರೆ, ನಾವುಗಳು ಬುದ್ಧಿಪೂರ್ವಕವಾಗಿ ಉಪಕಾರ ಮಾಡುವದಿರಲಿ... ತಿಳಿದರೂ ತಿಳಿಯದೇನೇ ಪೀಡಿಸುವಲ್ಲಿಯೇ ಬಹಳ ಆಸಕ್ತಿಯನ್ನು ಹೊಂದಿದವರು.
ಇತಿಹಾಸದಲ್ಲಿ ರಂತಿದೇವನ ಕಥೆಯನ್ನು ಕೇಳುತ್ತೇವೆ, ಆ ರಾಜನು 40 ದಿನಗಳ ಒರೆಗೆ ಉಪವಾಸವಿರುತ್ತಾನೆ. 40 ದಿನಗಳು ಕೆಳೆದಮೇಲೆ ಅವನಿಗೆ ಊಟದ ಭಾಗ್ಯವು ಬಂದಿರುತ್ತದೆ. ಇನ್ನೇನು ಊಟ ಮಾಡಬೇಕು ಎನ್ನುವಷ್ಟರಲ್ಲಿ ಹಸಿವೆಯಿಂದ ಒದ್ದಾಡುವ ಯಾರೋ ಒಬ್ಬ ವ್ಯಕ್ತಿಯು ಬಂದು ಅನ್ನವನ್ನು ಕೇಳಿದಾಗ... ಕೈಯೆತ್ತಿ ಆ ಅನ್ನವನ್ನು ಖುಷಿಯಿಂದ ಕೊಟ್ಟು ಬಿಡುತ್ತಾನೆ. ಇದುವೇ ನಿಜವಾದ ಪರೋಪಕಾರ. ನಾವು ಮಾಡುವ ಉಪಕಾರದ ಹಿಂದೆ ಸ್ವಾರ್ಥದ ನೆರಳು ಕಿಂಚಿತ್ತಾದರೂ ಇದ್ದರೆ ಅದು ಸರ್ವಥಾ ಪರೋಪಕಾರವಾಗುವದಿಲ್ಲ.
ರಾಷ್ಟ್ರಕವಿಯಾಗಿರುವ ಮೈಥಿಲೀ ಶರಣ ಗುಪ್ತಾ ಹೇಳುವ ಮಾತು ಹೀಗಿದೆ:- *वही उदार है परोपकार जो करे , वही मनुष्य है की जो मनुष्य के लिये मरे*। ಪರೋಪಕಾರವನ್ನು ಮಾಡುವ ವ್ಯಕ್ತಿಯೊಬ್ಬನೇ ಉದಾರತೆಯನ್ನು ಹೊಂದಿದವನು, ನಮ್ಮಲ್ಲಿ ಅಷ್ಟು ಉದಾರತೆಯಿದೆ ಇಷ್ಟು ಉದಾರತೆಯಿದೆ ಎಂದು ಹೇಳಿಕೋಂಡು ಪ್ರಯೋಜನವೇನು...? ಮಾನವನಿಗೆ ಉಪಕಾರವನ್ನು ಮಾಡುವಲ್ಲಿ ಯಾರು ತಮ್ಮ ಜೀವನವನ್ನು ಪಣಕ್ಕೀಡುವರೋ ಅವರೇ ನಿಜವಾದ ಮಾನವ ಜಾತಿಗೆ ಸೇರಿದವರು. ಉಪಕಾರವನ್ನು ಮಾಡದ ಮನುಷ್ಯನು ಬದುಕಿಯಾದರೂ ಪ್ರಯೋಜನವೇನು..?
ಇಷ್ಟು ಮಹತ್ವವವನ್ನು ಕೊಟ್ಟಿದ್ದಾರೆ ಪರೋಪಕಾರಕ್ಕೆ , ಹಾಗು ಅದನ್ನು ಮಾಡುವ ಮನುಷ್ಯನಿಗೆ.
ತುಳಸಿದಾಸರೂ ಕೂಡಾ ತಮ್ಮ ಕೃತಿಯಲ್ಲಿ ಹೀಗೆ ಹೇಳುತ್ತಾರೆ:-
*परहित सरिस धर्म नहिं भाई , पर पीड़ा सम नहिं अधमाई* ಎಂದು. ಅರ್ಥ:- ಪರೋಪಕಾರಕ್ಕೂ ಮಿಗಿಲಾದ ಶ್ರೇಷ್ಠ ಧರ್ಮವಿಲ್ಲ. ಪರಪೀಡನೆಗೂ ಮಿಗಿಲಾದ ಅಧೋಗತಿಯು ನಮಗಿಲ್ಲ. ಪರಪೀಡನೆಯಿಂದ ಘೋರವಾದ ಅಧೋಗತಿಯು ನಮಗಿದೆ.
ಮನುಷ್ಯ ಪರೋಪಕಾರವನ್ನು ಹೇಗಾದರೂ ಮಾಡೇನು... ಎಂದು ಸತತವೂ ಕಾಯುತ್ತಿರಬೇಕಂತೆ... ಇಂತಹ ಸಂದೇಶವನ್ನು ಶಾಸ್ತ್ರವು ನಮಗೆ ಬೇಕಾದಷ್ಟು ಮಾಡಿದರೂ ಆ ಕಡೆಗೆ ಗಮನವನ್ನು ಕೊಡದಿರಲು.... ಕೊನೆಪಕ್ಷಕ್ಕೆ ನಾವುಗಳು ಹಿತವನ್ನು ಬಯಸುವಂತಾದರೂ ಆಗಲಿ ಎನ್ನುವದಕ್ಕಾಗಿ *सर्वे भवंतु सुखिनः सर्वे संतु निरामया* ಎಂಬ ಮಾತನ್ನು ಹೇಳಿದೆ. ಇಂತಹ ಪ್ರಾರ್ಥನೆಯು ಸತತವೂ ನಮ್ಮದಾದಲ್ಲಿ ಪರೋಪಕಾರವನ್ನು 50% ಮಾಡಿದಂತೆಯೇ ಸರಿ.
ಹಿಂದಕ್ಕೆ ಕೃತಯುಗದಲ್ಲಿ ವೃತ್ರಾಸುರನೆಂಬ ದೈತ್ಯನಿದ್ದಾ ಅವನು ಮೂರು ಲೋಕಗಳನ್ನು ತಲ್ಲಣಗೊಳಿಸುವ ಪರಾಕ್ರಮವನ್ನು ಹೊಂದಿದವನು. ಅವನನ್ನು ಕೊಲ್ಲುವ ಬಗೆಯು ತಿಳಿಯದಿರಲು... ದೇವತೆಗಳೆಲ್ಲರೂ ಬ್ರಹ್ಮದೇವರ ಆಜ್ಞೆಯಿಂದ ದಧೀಚಿ ಋಷಿಗಳ ಬಳಿ ಬಂದು, ಆ ದೈತ್ಯನ ಸಂಹಾರ ಮಾಡುವ ಮೂಲಕ ಮೂರುಲೋಕಗಳ ಸಂರಕ್ಷಣೆ ಮಾಡಲು ಅವರ ಬೆನ್ನೆಲುಬನ್ನು ಕೇಳಿದಾಗ, ಹಿಂದೆ ಮುಂದೆ ಅಲೋಚಿಸದೇನೇ ತಮ್ಮ ಬೆನ್ನೆಲುಬನ್ನು ಕೊಟ್ಟು , ಯೋಗಶಕ್ತಿಯಿಂದ ದೇಹವನ್ನು ತ್ಯಜಿಸುತ್ತಾರೆ. ಅವರ ಆ ಬೆನ್ನೆಲುಬೇ ಮುಂದೆ ವಜ್ರಾಯುಧವಾಗಿ ಪರಿಣಾಮ ಗೊಂಡಿತು. ಅದರಿಂದ ಇಂದ್ರನು ವೃತ್ರಾಸುರನೆಂಬ ದೈತ್ಯನ ಸಂಹಾರ ಮಾಡಿದ. ಇದುವೇ ನಿಜವಾದ ಉಪಕಾರ ಎನ್ನಬೇಕು. ಅವರು ಬೆನ್ನೆಲುಬನ್ನು ಕೊಡದೇ ಹೋದರೆ ಆ ದೈತ್ಯನ ಸಂಹಾರ ಅಸಾಧ್ಯ , ಅದರಿಂದ ಮೂರು ಲೋಕಗಳ ರಕ್ಷಣೆಯು ಇನ್ನೂ ಅಸಾಧ್ಯ.
*गंगा गंगेति यो ब्रूयात् यो जनानां शतैरपि
मुच्यते सर्वपापेभ्यः जन्मजन्मान्तरेश्वपि* ಎಂಬುದಾಗಿ ಯಾವ ಗಂಗೆಯ ಮಹಿಮೆಯನ್ನು ನಾವುಗಳು ಕೇಳುತ್ತೇವೆಯೋ... ಅಂತಹ ಗಂಗೆಯನ್ನು ನಮ್ಮ ಪಾಪವನ್ನು ಪರಿಹರಿಸಿಕೊಳ್ಳಲು ಧರೆಗಿಳಿಸಿದ ಭಗೀರಥ ರಾಜನ ಉಪಕಾರವನ್ನು ಎಂದಿಗೂ ಮರೆಯುವಂತಿಲ್ಲ.
ಇವೆಲ್ಲಾ ಕಥೆಗಳು.. ನಾವುಗಳು ಪರೋಪಕಾರಾದ ದಾರಿಯಲ್ಲಿ ಸಾಗಲು ಪ್ರೋತ್ಸಾಹಕವಾಗಿವೆ.
ಪರೋಪಕಾರದ ವಿಷಯದಲ್ಲಿ ಕುಮಾರವ್ಯಾಸಭಾರತದ ಮಾತೊಂದು ಹೀಗಿದೆ:-
ವನಿತೆ ಮಕ್ಕಳು ಒಡನೆ ಬಾರರು
ತನುದೊರೆಯೆ ಬಂಧುಗಳು ಬಾರರು
ದಿನ ದಿನದೊಳೊಡರಿಚಿದ ದುಷ್ಕೃತ ಬೆನ್ನಬಿಡದಿಹುದು
ಅನವರತ ನೀನೊಲಿದು ಮಾಡಿದ
ವಿನಯಧರ್ಮ ಪರೋಪಕಾರವು
ನಿನಗೆ ಬೆಂಬಲವಾಗಿಹುದು ಕೇಳೆಂದನಾ ವಿದುರ
(ಉದ್ಯೋಗ ಪರ್ವ, ೩ ಸಂಧಿ, ೧೧೮ ಪದ್ಯ)
ತಾತ್ಪರ್ಯ:
ನಾವು ನಮ್ಮ ದೇಹವನ್ನು ಬಿಟ್ಟಾಗ ನಮ್ಮ ಜೊತೆ ಹೆಂಡತಿ, ಮಕ್ಕಳು, ಬಾಂಧವರು ಯಾರು ನಮ್ಮೊಂದಿಗೆ ಬರುವುದಿಲ್ಲ. ಜೀವಿತ ಕಾಲದಲ್ಲಿ ಪ್ರತಿನಿತ್ಯ ಮಾಡಿದ ಪಾಪಕರ್ಮಗಳು ಬಿಡದೆ ಬೆನ್ನು ಹತ್ತುತ್ತವೆ. ಸದಾ ನೀನು ಮಾಡಿದ ಧರ್ಮ, ನಿನ್ನ ವಿನಯ, ಪರೋಪಕಾರಗಳು ಸದಾ ನಿನ್ನ ಬೆಂಬಲವಾಗಿ ನಿಲ್ಲುತ್ತವೆ ಎಂದು ವಿದುರ ತಿಳಿಸಿದನು.
ಹಾಗಾಗಿ ಜೀವನದಲ್ಲಿ ಅತ್ಯಂತ ಮುಖ್ಯವಾದ ಪರೋಪಕಾರದ ಗುಣವನ್ನು ಸಂಪಾದಿಸುವಲ್ಲಿ ನಮ್ಮ ವಿಶೇಷವಾದ ಪ್ರಯತ್ನ ಹಾಗೂ ಪ್ರಾರ್ಥನೆಗಳು ಅವಶ್ಯವಾಗಿ ಇರಬೇಕು.
*ಶ್ರೀಕೃಷ್ಣಾರ್ಪಣಾಮಸ್ತು*..
[07/04, 11:16 am] Aniketana: ಆತ್ಮಾನ್ವೇಷಣೆ-3.
(ಪ್ರಸ್ತಾವನೆಯಿಂದ ಆಯ್ದ ಭಾಗ.)
ದೇಶ, ಜನಾಂಗ, ಧರ್ಮ, ಮತ, ಲಿಂಗ, ಪ್ರಾಯ, ಸಿರಿತನ, ಬಡತನ, ಇತ್ಯಾದಿ ಯಾವ ಭೇದವೂ ಇಲ್ಲದೆ ಎಲ್ಲರಿಗೂ ಇರುವ ಅಥವಾ ಯಾರನ್ನೂ ಬಿಡದಿರುವ ಏಕೈಕ ಸಮಸ್ಯೆಯು ಸುಖ-ದುಃಖಗಳದ್ದೇ ಆಗಿದೆ. ಸುಖ ಬೇಕಾಗಿದೆ; ದುಃಖ ಬೇಡವಾಗಿದೆ. ಬೇಕಾದ ಸುಖವನ್ನು ಪಡೆಯುವುದು ಹೇಗೆ? ಬೇಡವಾದ ದುಃಖವನ್ನು ಬಿಡುವುದು ಹೇಗೆ? ಇವೆರಡನ್ನೂ ತಿಳಿಯದಿರುವುದೇ ಎಲ್ಲರ ಸಮಸ್ಯೆಗಳ ಮೂಲವಾಗಿದೆ. ಸುಖವನ್ನೇ ಪಡೆಯುವುದು ಹೇಗೆ ಎಂದು ಗೊತ್ತಿಲ್ಲ, ಆದ್ದರಿಂದ ಸುಖಕರವಾದವುಗಳನ್ನು ಪಡೆದು ಸುಖವನ್ನೇ ಪಡೆದೆವು ಎಂದು ಭ್ರಮಿಸುವುದು ಎಲ್ಲೆಲ್ಲೂ ಕಂಡುಬರುತ್ತದೆ. ಹಾಗೆಯೇ ದುಖವನ್ನೇ ಬಿಡುವುದು ಹೇಗೆ ಎಂದು ಗೊತ್ತಿಲ್ಲ, ಆದ್ದರಿಂದ ದುಃಖಕರವಾದವುಗಳನ್ನು ಬಿಟ್ಟು ದುಃಖವನ್ನೇ ಬಿಟ್ಟೆವು ಎಂದು ಭ್ರಮಿಸುವುದೂ ಕಂಡುಬರುತ್ತದೆ. ಇವೆರಡೂ ಭ್ರಮೆಗಳೇ ಏಕೆಂದರೆ ವಸ್ತುಗಳನ್ನು ಪಡೆಯಬಹದು ಅಥವಾ ತ್ಯಜಿಸಬಹುದು ಆದರೆ ಸುಖ-ದುಃಖಗಳನ್ನು ವಸ್ತುಗಳಂತೆ ಪಡೆಯಲು ಅಥವಾ ಬಿಡಲು, ಅವೆರಡಕ್ಕೂ ವಸ್ತುತ್ವವಿಲ್ಲದಿರುವುದರಿಂದ, ಸಾಧ್ಯವಿಲ್ಲ. ಈ ಎರಡು ಭ್ರಮೆಗಳೇ ಎಲ್ಲರ ಎಲ್ಲ ಚಟುವಟಿಕೆಗಳಿಗೂ ಮೂಲವಾಗಿವೆ. ಈ ಭ್ರಮೆಯಲ್ಲಿ ಸಿಲುಕಿಯೂ ಅದನ್ನು ತಿಳಿಯಲಾಗದೆ ಮತ್ತೂ ಮತ್ತೂ ಸುಖವನ್ನು ಪಡೆದೆವೆಂದೋ ದುಃಖವನ್ನು ದೂರಮಾಡಿಕೊಂಡೆವೆಂದೋ ತಮ್ಮ ಸಾಹಸಕ್ಕಾಗಿ ತಮ್ಮನ್ನು ತಾವೇ ಜ್ಞಾನಿಗಳೂ ಸಮರ್ಥರೂ ಎಂದುಕೊಳ್ಳುತ್ತಿರುವುದನ್ನೇ ‘ಸಂಸಾರ ಬಂಧನ’, ‘ಮಾಯಾಪಾಶ’, ‘ಅಜ್ಞಾನ’ಎಂದು ಮುಂತಾಗಿ ಶಾಸ್ತ್ರ-ಇತಿಹಾಸ-ಪುರಾಣಗಳಲ್ಲಿ ವರ್ಣಿಸಿದ್ದಾರೆ. ಎಲ್ಲ ಭಯಗಳಿಗಿತಲೂ ಮರಣಭಯವೇ ಮಹದ್ಭಯವು. ಮರಣದ ನಂತರ ಸ್ವರ್ಗ
[07/04, 11:28 am] Aniketana: ದೇಹ ನಶ್ವರ, ಆತ್ಮ ಅಮರ....
ಬದುಕಿನ ಜಂಜಾಟದಿಂದ ಬೇಸತ್ತ ಯುವಕನೊಬ್ಬ ಬುದ್ಧನ ಬಳಿ ಬಂದು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಕೇಳಿಕೊಂಡ. ಸ್ಮಶಾನದಲ್ಲಿ ಒಂದು ಹಗಲು ಒಂದು ರಾತ್ರಿ ಕಳೆದು ಬಂದರೆ ಇದು ಸಾಧ್ಯವೆಂದು ಬುದ್ಧ ಷರತ್ತು ವಿಧಿಸಿದ. ಯುವಕ ಹಾಗೆಯೇ ಮಾಡಿ ಬಂದಾಗ, ‘ಅಲ್ಲಿ ನೀನು ಕಂಡದ್ದೇನು, ಆದ ಅನುಭವವೇನು?’ ಎಂದು ಬುದ್ಧ ಪ್ರಶ್ನಿಸಿದ. ‘ಹಗಲಲ್ಲಿ ಎರಡು ಶವಗಳು ಅಂತಿಮ ಸಂಸ್ಕಾರಕ್ಕಾಗಿ ಬಂದಿದ್ದವು, ಒಂದು ಧನಿಕನದ್ದು ಮತ್ತೊಂದು ಬಡವನದ್ದು’ ಎಂದ ಯುವಕ. ‘ಆ ಎರಡೂ ಚಿತೆಗಳ ಬೆಂಕಿಯಲ್ಲಿ ಏನಾದರೂ ವ್ಯತ್ಯಾಸವಿತ್ತೇ?’ ಎಂದು ಬುದ್ಧ ಮರುಪ್ರಶ್ನಿಸಿದಾಗ, ‘ಇಲ್ಲ, ಎರಡೂ ಸಮನಾಗಿ ಉರಿದು ಬೂದಿಯಾದವು’ ಎಂದ ಯುವಕ. ‘ರಾತ್ರಿಯಲ್ಲಿ ಏನು ಕಂಡೆ?’ ಎಂಬ ಬುದ್ಧನ ಪ್ರಶ್ನೆಗೆ ‘ರಾತ್ರಿಯಿಡೀ ಚಿಕ್ಕ ಸದ್ದಾದರೂ ಬೆಚ್ಚಿಬೀಳುತ್ತಿದ್ದೆ, ಅಂಗೈಲಿ ಜೀವಹಿಡಿದು ಬೆಳಗ್ಗೆ ಎದ್ದುಬಂದೆ’ ಎಂದು ಯುವಕ ಉತ್ತರಿಸಿದ.
‘ನೀನು ಇನ್ನೂ ಒಂದು ಹಗಲು-ರಾತ್ರಿ ಅಲ್ಲೇ ಕಳೆಯಬೇಕು’ ಎಂದು ಬುದ್ಧ ಆದೇಶಿಸಿದಾಗ, ‘ಈಗಾಗಲೇ ಭಯಗ್ರಸ್ತನಾಗಿರುವ ನನ್ನನ್ನು ಅಲ್ಲಿಗೇ ಮತ್ತೆ ಕಳಿಸುವ ಉದ್ದೇಶವೇನು?’ ಎಂದು ಯುವಕ ದಿಗಿಲಾದ. ತನ್ನ ಉದ್ದೇಶ ಈಡೇರದ ಕಾರಣ ಮತ್ತೆ ಕಳಿಸುತ್ತಿರುವುದಾಗಿ ಬುದ್ಧ ಹೇಳಿದ. ಹೀಗೆ ಸ್ಮಶಾನದಲ್ಲಿ ಮತ್ತೊಂದು ದಿನ-ರಾತ್ರಿ ಕಳೆದು ವಾಪಸಾದ ಯುವಕನಿಗಾದ ಅನುಭವದ ಕುರಿತು ಬುದ್ಧ ಕೇಳಿದಾಗ, ‘ಒಂದು ವಿಸ್ಮಯ ಕಂಡೆ. ಉರಿಯುವ ಚಿತೆಯನ್ನೇ ದಿಟ್ಟಿಸುತ್ತ ಕುಳಿತಿದ್ದ ನನಗೆ, ಇದ್ದಕ್ಕಿದ್ದಂತೆ ನನ್ನ ಹೆಣವನ್ನೇ ಅಲ್ಲಿಗೆ ಹೊತ್ತು ತಂದಂತಾಯ್ತು. ಸುತ್ತ ನೆರೆದಿದ್ದ ತಂದೆ, ಅಣ್ಣ, ಬಂಧು-ಮಿತ್ರರು ಅಳುತ್ತಿದ್ದರೂ, ಅವರಲ್ಲಿ ಕೆಲವರದ್ದು ತೋರಿಕೆಯ ಅಳುವಾಗಿತ್ತು. ಕೆಲವರು ‘ನೀನೇ ಮುಂದಿನ ಏಕೈಕ ವಾರಸುದಾರ’ ಎಂದು ಅಣ್ಣನಿಗೆ ಹೇಳುತ್ತಿದ್ದರೆ, ಮತ್ತೆ ಕೆಲವರಂತೂ ‘ಈತ ನಿಷ್ಪ್ರಯೋಜಕ ಸತ್ತಿದ್ದೇ ಒಳ್ಳೆಯದಾಯಿತು’ ಎನ್ನುತ್ತಿದ್ದರು. ನನ್ನ ಚಿತೆಗೆ ಅಗ್ನಿಸ್ಪರ್ಶವಾಗಿ, ದೇಹ ಬೂದಿಯಾಯಿತು. ನನ್ನಾತ್ಮ ದೂರದಿಂದಲೇ ಎಲ್ಲವನ್ನೂ ನೋಡುತ್ತಿತ್ತು. ರಾತ್ರಿಯೆಲ್ಲ ಒಂದಿನಿತೂ ಭಯವಿಲ್ಲದೆ ಉರಿಯುವ ನನ್ನ ಚಿತೆಯನ್ನೇ ನೋಡುತ್ತಿದ್ದೆ’ ಎಂದುತ್ತರಿಸಿದ ಯುವಕ. ಆಗ ಬುದ್ಧ, ‘ಈ ದೇಹ ನಶ್ವರ, ಆದರೆ ಆತ್ಮವು ಎಂದಿಗೂ ಅಮರ ಎನ್ನುವ ಸತ್ಯ ನಿನಗೆ ತಿಳಿದಂತಾಯಿತು. ನೀನೀಗ ನನ್ನ ಶಿಷ್ಯನಾಗಬಹುದು’ ಎನ್ನುತ್ತ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ. ಪಂಚಭೂತಗಳಿಂದ ಬಂದ ಮಾನವ ಶರೀರ ಅಂತಿಮವಾಗಿ ಲೀನವಾಗುವುದು ಅವುಗಳಲ್ಲೇ. ಇದು ಗೊತ್ತಿದ್ದೂ ಬಹಳಷ್ಟು ಮಂದಿ ಬದುಕಿನುದ್ದಕ್ಕೂ ಹಣ-ಆಸ್ತಿ-ಅಂತಸ್ತು-ಪ್ರತಿಷ್ಠೆಯ ಹಿಂದೆಯೇ ಓಡುತ್ತಾರೆ. ತೊಟ್ಟಿಲಲ್ಲಿ ಆಡಿದ ಎಲ್ಲರೂ ಒಂದು ದಿನ ಸ್ಮಶಾನಕ್ಕೆ ಹೋಗಲೇಬೇಕು ಎಂಬ ಅರಿವಿದ್ದರೂ ಅಧರ್ಮದ ಹಾಡಿ ಹಿಡಿಯುತ್ತಾರೆ, ಕ್ರೌರ್ಯ-ಹಿಂಸೆ-ಹೊಡೆದಾಟಗಳಲ್ಲಿ ವ್ಯಸ್ತರಾಗುತ್ತಾರೆ. ಅದರ ಬದಲು, ಅಂತರಂಗ ಮೆಚ್ಚುವಂಥ ಕೆಲಸ ಮಾಡಿ, ನ್ಯಾಯ-ನೀತಿ-ಧರ್ಮದ ಮಾರ್ಗದಲ್ಲಿ ನಡೆದರೆ ಆತ್ಮಕ್ಕೂ ಒಂದು ಸಾರ್ಥಕ್ಯ ದಕ್ಕುವುದಲ್ಲವೇ?