ಜಾಗತಿಕ ಲಿಂಗಾಯತ ಮಹಾಸಭಾ ಕರ್ನಾಟಕ

  • Home
  • India
  • main road
  • ಜಾಗತಿಕ ಲಿಂಗಾಯತ ಮಹಾಸಭಾ ಕರ್ನಾಟಕ

ಜಾಗತಿಕ ಲಿಂಗಾಯತ ಮಹಾಸಭಾ ಕರ್ನಾಟಕ ಕಲ್ಯಾಣ ರಾಜ್ಯ ಕಟ್ಟೋಣ ಬನ್ನಿ

ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರು ಶರಣ ಶ್ರೀ ಶಾಮನೂರು ಶಿವಶಂಕರಪ್ಪ ಲಿಂಗೈಕ್ಯರಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಶರಣರಗೆ ಚಿರಶಾಂತಿ ದೊ...
15/12/2025

ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರು ಶರಣ ಶ್ರೀ ಶಾಮನೂರು ಶಿವಶಂಕರಪ್ಪ ಲಿಂಗೈಕ್ಯರಾಗಿದ್ದಾರೆ.

ಶಾಮನೂರು ಶಿವಶಂಕರಪ್ಪ ಶರಣರಗೆ ಚಿರಶಾಂತಿ ದೊರೆಯಲಿ.

ಬಯಲುದಿಂದ ಬಂದಿದ್ದರು. ಮೃತ್ಯಲೋಕದಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಮತ್ತೆ ಬಯಲಿನಲ್ಲಿ ಬಯಲಾದರು.

ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು,
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ
ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ.
ಕೂಡಲ ಸಂಗಮದೇವರ ಶರಣ ಸೊಡ್ಡಳ ಬಾಚರಸರು
ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ,
ಉಪಮಿಸಬಲ್ಲವರ ಕಾಣೆನು

17/10/2025
ಶರಣೆ ಶ್ರೀಮತಿ ನಿರ್ಮಲಾ ಶಿವಾನಂದ ಜಾಮ್ದಾರ್ ಅವರು ಇಂದು ಶನಿವಾರ ದಿ. 26.04.2025 ರಂದು ಬೆಳಗ್ಗೆ ಬೆಂಗಳೂರಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಅವರ...
27/04/2025

ಶರಣೆ ಶ್ರೀಮತಿ ನಿರ್ಮಲಾ ಶಿವಾನಂದ ಜಾಮ್ದಾರ್ ಅವರು ಇಂದು ಶನಿವಾರ ದಿ. 26.04.2025 ರಂದು ಬೆಳಗ್ಗೆ ಬೆಂಗಳೂರಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಅವರ ಅಂತ್ಯಕ್ರಿಯೆ ಬೆಳಗಾವಿಯಲ್ಲಿ ಸೋಮವಾರ ದಿ. 28.04.2025 ರಂದು ಮಧ್ಯಾನ್ಹ 12 ಗಂಟೆಗೆ ಸದಾಶಿವನಗರದ ರುದ್ರಭೂಮಿಯಲ್ಲಿ ಜರುಗಲಿದೆ.
ಲಿಂಗೈಕ್ಯರಾದ ಶರಣೆ ಶ್ರೀಮತಿ ನಿರ್ಮಲಾ ಅವರು ನಿವೃತ್ತ ಹಿರಿಯ ಐ ಎ ಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ಶರಣ ಶ್ರೀ ಡಾ. ಶಿವಾನಂದ ಜಾಮದಾರ್ ಅವರ ಧರ್ಮಪತ್ನಿಯಾಗಿದ್ದಾರೆ.

ಹದಿನೇಳನೆಯ ಶತಮಾನಕ್ಕಿಂತ ಮೊದಲು ಲಿಂಗಾಯತ ಧರ್ಮದ ಸಂಸ್ಥಾಪಕರು ಯಾರೆಂಬುದರ ಬಗ್ಗೆ ಯಾರಿಗೂ ಸಂದೇಹವಿರಲಿಲ್ಲ. ವಿರಕ್ತ ಪೀಠದ ಸ್ವಾಮಿಗಳೂ, ಗುರುಪೀ...
15/04/2024

ಹದಿನೇಳನೆಯ ಶತಮಾನಕ್ಕಿಂತ ಮೊದಲು ಲಿಂಗಾಯತ ಧರ್ಮದ ಸಂಸ್ಥಾಪಕರು ಯಾರೆಂಬುದರ ಬಗ್ಗೆ ಯಾರಿಗೂ ಸಂದೇಹವಿರಲಿಲ್ಲ. ವಿರಕ್ತ ಪೀಠದ ಸ್ವಾಮಿಗಳೂ, ಗುರುಪೀಠದ ಸ್ವಾಮಿಗಳೂ ಅವರವರ ಅನುಯಾಯಿಗಳೂ 12ನೇ ಶತಮಾನದಲ್ಲಿ ಬಸವಣ್ಣನವರೇ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರೆಂಬುದನ್ನು ಒಪ್ಪಿಕೊಂಡಿದ್ದರು... ಆದರೆ ಮುಂದೆ ಆಧುನಿಕ ವಿದ್ವಾಂಸರು ಈ ವಿಷಯದಲ್ಲಿ ಗೊಂದಲ ಎಬ್ಬಿಸಿ ಸುಳ್ಳು ಸಾಕ್ಷ್ಯಗಳನ್ನ ಹೇಗೆಲ್ಲಾ ಸೃಷ್ಟಿ ಮಾಡಿದರು ಎಂಬುದನ್ನು ದಾಖಲೆಗಳ ಸಹಿತ ಬರೆದಿದ್ದಾರೆ ಪ್ರೊ. ಎನ್.ಜಿ.ಮಹಾದೇವಪ್ಪನವರು ಬಯಲು ಬ್ಲಾಗಿನಲ್ಲಿ-
ಓದಿ, ಪ್ರತಿಕ್ರಿಯಿಸಿ-

https://bayalu.co.in/ಲಿಂಗಾಯತ-ಧರ್ಮ-ಸಂಸ್ಥಾಪಕರು/

25/01/2024

ಸರ್ವರಿಗೂ 🙏🙏🙏🙏🙏ಜನೆವರಿ 27 28ರಂದು ನಡೆಯುವ ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಿಳಾ ಅಧಿವೇಶನದಲ್ಲಿ ಭಾಗವಹಿಸುವವರಿಗೆ ಈ ಕೆಳಗಿನ ನಿಯಮಗಳನ್ನು ಪಾಲಿಸಲು ವಿನಂತಿ

1) 27 ರಂದು ಮುಂಜಾನೆ 8-30 ಘಂಟೆಗೆ ಬೆಳಗಾವಿ ನಗರ ಶ್ರೀ ನಗರ ಉದ್ಯಾನದಲ್ಲಿ ಪುರುಷರು ಬಿಳೆ ಸಮವಸ್ತ್ರ ಮಹಿಳೆಯರು ಇಳಕಲ್ ಸೀರೆ ಹಣೆಗೆ ವಿಭೂತಿ ಕೊರಳಲ್ಲಿ ಲಿಂಗ ರುದ್ರಾಕ್ಷಿ ಧರಿಸಿ ಹಾಜರ ಇದ್ದು ಮೆರವಣಿಗೆಯಲ್ಲಿ ನಾನು ಲಿಂಗಾಯತ ಎಂಬ ಶ್ರದ್ಧಾ ಭಕ್ತಿ ಮತ್ತು ಹೆಮ್ಮೆಯಿಂದ ಭಾಗವಹಿಸಿ ದಿನದ ಉಳಿದೆಲ್ಲ ಕಾರ್ಯಕ್ರಮದಲ್ಲಿ ಹಾಜರಿದ್ದರು ಭಾಗವಹಿಸಲು ವಿನಂತಿ👏
2) ಅದೇ ದಿನ ಸಾಯಂಕಾಲ 7-00ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗುವವು.

3)ದಿನಾಂಕ 28ರಂದು ಮುಂಜಾನೆ 7-00 ಘಂಟೆಗೆ ನಡೆಯುವ ಸಾಮೂಹಿಕ ಲಿಂಗ ಪೂಜೆಗೆ 6-45 ಘಂಟೆಗೆ ಉಪಸ್ಥಿತಿ ಕೇರಳ ಕಾಟನ್ ಸಾಡಿ ಕಡ್ಡಾಯ. ಲಭ್ಯ ಇಲ್ಲದ ಸಂದರ್ಭದಲ್ಲಿ ಬಿಳೆ ಸಮವಸ್ತ್ರದಲ್ಲಿರಬೇಕು ಪುರುಷರಿಗೂ ಬಿಳೆ ಸಮವಸ್ತ್ರ ಕಡ್ಡಾಯ. ಪೂಜಾ ಪರಿಕರಗಳನ್ನು ಮಹಾಸಭಾದಿಂದ ಒದಗಿಸಲಾಗುವುದು. ಬೆಳಗಿನ ಪ್ರಸಾದ ನಂತರ ವೇದಿಕೆ ಕಾರ್ಯ ಕ್ರಮಗಳು ಪ್ರಾರಂಭ ಯಶಸ್ವಿಗೊಳಿಸಲು ವಿನಂತಿ🙏

12 ನೇ ಶತಮಾನದಲ್ಲಿ ಮಹಿಳೆಯರೂ ಒಳಗೊಂಡಂತೆ ಎಲ್ಲಾ ಶೋಷಿತ  ಕಾಯಕ ವರ್ಗಕ್ಕೆ ತನ್ನ ಕ್ರಾಂತಿಕಾರಿ ಹೋರಾಟದಿಂದ ಆತ್ಮಗೌರವ, ಪ್ರಜಾಪ್ರಭುತ್ವದ ಪರಿಕಲ...
18/01/2024

12 ನೇ ಶತಮಾನದಲ್ಲಿ ಮಹಿಳೆಯರೂ ಒಳಗೊಂಡಂತೆ ಎಲ್ಲಾ ಶೋಷಿತ ಕಾಯಕ ವರ್ಗಕ್ಕೆ ತನ್ನ ಕ್ರಾಂತಿಕಾರಿ ಹೋರಾಟದಿಂದ ಆತ್ಮಗೌರವ, ಪ್ರಜಾಪ್ರಭುತ್ವದ ಪರಿಕಲ್ಪನೆ ಹಾಗೂ ದಾಸೋಹ ಸಂಸ್ಕೃತಿ ಕೊಟ್ಟಿದ್ದು ಜಗಜ್ಯೋತಿ ಬಸವೆಶ್ವರರು... 🙏💐
ಜಾತಿ ಬೇಧವಿಲ್ಲದ ಸಮಸಮಾಜಕ್ಕೆ ಹೋರಾಟ ಮಾಡಿದ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸಿದ್ದರಾಮಯ್ಯ ಸರಕಾರಕ್ಕೆ ಧನ್ಯವಾದಗಳು..🙏🎉

ಕಲಬುರ್ಗಿ  ಕಲಿಸಿದ್ದು 41ಲಿಂಗಾಯತ ಮಠಗಳು 3/4------------------------------ಲಿಂಗಾಯತ ಸಮಾಜದ ಪ್ರಥಮ ವಿರಕ್ತ ಮಠಗಳುತೋಂಟದ ಸಿದ್ಧಲಿಂಗ ಶಿವ...
13/01/2024

ಕಲಬುರ್ಗಿ ಕಲಿಸಿದ್ದು 41

ಲಿಂಗಾಯತ ಮಠಗಳು 3/4

------------------------------

ಲಿಂಗಾಯತ ಸಮಾಜದ ಪ್ರಥಮ ವಿರಕ್ತ ಮಠಗಳು

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಲಿಂಗೈಕ್ಯರಾದ ಬಳಿಕ 1570ರಲ್ಲಿ ಎಡೆಯೂರಿನ ಅವರ ಸಮಾದಿಯ ಮೇಲೆ ಒಂದು ಮಂಟಪವು ಎದ್ದು ಅಲ್ಲಿ ನಿತ್ಯ ಪೂಜೆಯ ವ್ಯವಸ್ಥೆಯಾಯಿತು.

ಆದರೆ ಅವರ ಉತ್ತರಾಧಿಕಾರಿ ಬೋಳಬಸವರು ಅಲ್ಲಿ ನಿಲ್ಲದೆ, ಧರ್ಮ ಪ್ರಚಾರಕ್ಕಾಗಿ ಹೊರಟರು. ಸಿದ್ಧಲಿಂಗರು ಹುಟ್ಟುಹಾಕಿದ್ದ ಸಂಚಾರಿ ಜಂಗಮ ಪರಂಪರೆಯನ್ನು ಮುಂದುವರೆಸಿದರು.

ಅವರ ನಂತರ ಪಟ್ಟಕ್ಕೆ ಬಂದ ಚೆನ್ನಂಜೆದೇವರು ಕೂಡಾ ಸಂಚಾರಿ ಜಂಗಮರಾದರು. ಈ ಜಂಗಮ ಸಂಪ್ರದಾಯ ಸ್ಥಾವರದತ್ತ ತಿರುಗಿದ್ದು ಅವರ ಉತ್ತರಾಧಿಕಾರಿ ಕಟ್ಟಿಗೆಹಳ್ಳಿ ಸಿದ್ಧಲಿಂಗರ ಕಾಲದಲ್ಲಿ.

ಅವರು ಪಾಳೇಗಾರ ಬಸವಂತರಾಯನ (1682-1705) ನೆರವಿನಿಂದ ಹರಪ್ಪನಹಳ್ಳಿಯಲ್ಲಿ ಮೊದಲ ಲಿಂಗಾಯತ ಮಠ ಸ್ಥಾಪಿಸಿ, ತಮ್ಮ ಶಿಷ್ಯ ಚೀಲಾಳ ಸ್ವಾಮಿಗಳನ್ನು ಪಟ್ಟಕ್ಕೆ ಕೂರಿಸಿದರು.

ಇದರಿಂದ ಮುನಿಸುಕೊಂಡ ಅವರ ಮತ್ತೊಬ್ಬ ಶಿಷ್ಯ ಮುರುಗಾ ಶಾಂತವೀರರು ಪಾಳೇಗಾರ ಭರಮಣ್ಣನಾಯಕನ (1656-1703) ನೆರವಿನಿಂದ ಚಿತ್ರದುರ್ಗದಲ್ಲಿ ಮುರುಗಾ ಮಠ ಸ್ಥಾಪಿಸಿದರು.

ಇನ್ನೊಬ್ಬ ಶಿಷ್ಯ ಕುಮಾರಸ್ವಾಮಿ ಸಾದ್ವಿ ಅರಸರ ಸಹಾಯದಿಂದ ಇಸಳೂರಿನಲ್ಲಿ ಮೂರನೇ ಮಠ ಸ್ಥಾಪಿಸಿದರು. ಇವೆಲ್ಲಾ ಶಾಖೆಗಳನ್ನು ರಚಿಸಿಕೊಳ್ಳುತ್ತಾ ಸಮರೋಪಾದಿಯಾಗಿ ಹರಡಿದವು.

(‘ವಿರಕ್ತ ಪರಂಪರೆಯ ಎರಡು ಪ್ರಥಮ ಮಠಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ - ಮಾರ್ಗ ೪.)

#ಕಲ್ಬುರ್ಗಿಕಲಿಸಿದ್ದು, #ನಾನುಕಲ್ಬುರ್ಗಿ #ಕನ್ನಡ #ಕನ್ನಡಕೊಬ್ಬಕಲ್ಬುರ್ಗಿ

ವಚನ ಸಾಹಿತ್ಯದ ಮೂಲಕ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾರಿದ ಶರಣ ಅಲ್ಲಮಪ್ರಭು ಅವರ ಹೆಸರನ್ನು ಶಿವಮೊಗ್ಗದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕಿಗ...
12/01/2024

ವಚನ ಸಾಹಿತ್ಯದ ಮೂಲಕ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾರಿದ ಶರಣ ಅಲ್ಲಮಪ್ರಭು ಅವರ ಹೆಸರನ್ನು ಶಿವಮೊಗ್ಗದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕಿಗೆ ನಾಮಕಾರಣ ಮಾಡಲಾಗುವುದು.

ಅನುಭವ ಮಂಟಪದ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲಿಗೆ ಈ ನೆಲದಲ್ಲಿ ಸ್ಥಾಪಿಸಿದ ಅಲ್ಲಮಪ್ರಭು ಅವರ ಜನ್ಮಭೂಮಿ ಶಿವಮೊಗ್ಗ ಜಿಲ್ಲೆಯಲ್ಲಿ ನಿಂತು ಈ ಘೋಷಣೆಯನ್ನು ಮಾಡಲು ನನಗೆ ಸಂತಸವಾಗುತ್ತಿದೆ. ಇದು ಅಲ್ಲಮಪ್ರಭು ಅವರ ಜೀವನ ಮತ್ತು ಆದರ್ಶಗಳಿಗೆ ನಾವು ನೀಡುವ ಗೌರವ ಎಂದು ಭಾವಿಸಿದ್ದೇನೆ.

#ಅಲ್ಲಮಪ್ರಭು #ಯುವನಿಧಿ

Address

#53, 2nd Main Road, 3rd Cross, Chakravarthy Layout, Palace Road, Bangalore-580020
Main Road
580020

Alerts

Be the first to know and let us send you an email when ಜಾಗತಿಕ ಲಿಂಗಾಯತ ಮಹಾಸಭಾ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Share