ಮಹಾಸತಿ ಶ್ರೀವೀರನಾಗಮ್ಮದೇವಿ, ವಡ್ಡಗೆರೆ

  • Home
  • India
  • Koratagere
  • ಮಹಾಸತಿ ಶ್ರೀವೀರನಾಗಮ್ಮದೇವಿ, ವಡ್ಡಗೆರೆ

ಮಹಾಸತಿ ಶ್ರೀವೀರನಾಗಮ್ಮದೇವಿ, ವಡ್ಡಗೆರೆ ವಡ್ಡಗೆರೆ ಶ್ರೀ ಅಮ್ಮಾಜಿ ವೀರನಾಗಮ್ಮ

ಸುಮಾರು 700 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಶ್ರೀ ವೀರ ನಾಗಮ್ಮನವರ ದೇವಾಸ್ಥಾನ, ಈ ದೇವಾಸ್ಥಾನದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮ ಜೋತೆಗೆ ಪ್ರತಿ ಸೋಮವಾರದಂದು ಅನ್ನ ಸಂತರ್ಪಣಾ ಕಾರ್ಯವು ನಡೆಯುತ್ತದೆ. ಶ್ರೀ ವೀರ ನಾಗಮ್ಮ ದೇವಾಸ್ಥಾನವು ಶ್ರೀ ವೀರನಾಗಮ್ಮ ದೇವಾಸ್ಥಾನ ಅಭಿವೃದ್ದಿ ಟ್ರಸ್ಟ್ ಹೊಂದಿದೆ.ಈ ಟ್ರಸ್ಟ್ ವತಿಯಿಂದ ಮದುವೆ ಮತ್ತು ಇತರೆ ಶುಭ ಸಮಾರಂಭಗಳು ನಡೆಯುತ್ತವೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಲಕ್ಷ ದಿಪೋತ್ಸವ ನಡೆಯುತ್ತದೆ. ಜೋತೆಗೆ ಪ್ರತಿ ವರ್ಷ ಯುಗಾದಿ ಹಬ್ಬದ ಮರುದಿನ ಜಾತ್ರಾ ಮಹೋತ್ಸವ ನಡೆಯುತ್ತದೆ. ದೇವಾಸ್ಥಾನದ ಪಕ್ಕದಲ್ಲಿ ಮಜ್ಜನ ಬಾವಿ ಇದ್ದು, ಇದು ಸದಾ ಕಾಲ ನೀರಿನಿಂದ ತುಂಬಿರುತ್ತದೆ.ಮತ್ತು ವಡ್ಡಗೆರೆಯಿಂದ ಸಮಾರು 1 ಕಿ.ಮೀ ದೂರದಲ್ಲಿ ಮದ್ಯಮ್ಮನ ಬೆಟ್ಟವಿದ್ದು, ಇಲ್ಲಿಯೂ ಕೂಡ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ.ವಡ್ಡಗೆರೆ ವ್ಯಾಪ್ತಿಗೆ ಸೇರಿದ ಮಲಪನಹಳ್ಳಿ ಹತ್ತಿರ ತಲಪುರಿಕೆ ಎಂಬ ಸ್ಥಳವಿದ್ದು,ಇಲ್ಲಿ ಸದಾ ಕಾಲ ನೀರು ಉಕ್ಕಿ ಹರಿಯುತ್ತದೆ. ಈ ನೀರಿನಿಂದ ಈ ಬಾಗದ ಜನರು ಸುಮಾರು 150 ಎಕರೆ ಜಮೀನುಗಳಿಗೆ ನೀರನ್ನು ಹಾಯಿಸಿಕೊಂಡು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಡರಾಗಿದ್ದಾರೆ.ವಡ್ಡಗೆರೆ ಗ್ರಾಮದಲ್ಲಿ ಬಂಡಿ ಮನೆ, ಎಂಬ ಮನೆಯಿದ್ದು ಇಲ್ಲಿ ಹಿಂದೆ ದೇವತೆಗಳು ಸರಕು ಸಾಗಾಣಿಕೆಗೆಂದು ಬಳಸುತ್ತಿದ್ದ ಬಂಡಿಗಳನ್ನು ಈ ಮನೆಯಲ್ಲಿ ನಿಲ್ಲಿಸುತ್ತಿದ್ದರು. ಆದ್ದರಿಂದ ಇದಕ್ಕೆ ಬಂಡಿಮನೆ ಎಂಬ ಹೆಸರು ಬಂದಿದ್ದು, ಇಂದಿಗೂ ಇಲ್ಲಿ ಈ ಬಂಡಿಗಳು ಕಾಣಸಿಗುತ್ತವೆ

Address

Shri Ammaji Vaddagere Veeranagamma Temple, Vaddagere
Koratagere
572129

Alerts

Be the first to know and let us send you an email when ಮಹಾಸತಿ ಶ್ರೀವೀರನಾಗಮ್ಮದೇವಿ, ವಡ್ಡಗೆರೆ posts news and promotions. Your email address will not be used for any other purpose, and you can unsubscribe at any time.

Shortcuts

Share