ವೀರಶೈವ ಲಿಂಗಾಯತ ಮಹಾ ವೇದಿಕೆ, Veerashaiva Lingayata Maha Vedike

  • Home
  • India
  • Bangalore
  • ವೀರಶೈವ ಲಿಂಗಾಯತ ಮಹಾ ವೇದಿಕೆ, Veerashaiva Lingayata Maha Vedike

ವೀರಶೈವ ಲಿಂಗಾಯತ ಮಹಾ ವೇದಿಕೆ, Veerashaiva Lingayata Maha Vedike ಪ್ರಶಾಂತ್ ಕಲ್ಲೂರ್ ಅಧ್ಯಕ್ಷತೆಯ ವೀರಶೈವ ಲಿಂಗಾಯತ ಮಹಾ ವೇದಿಕೆ Veerashaiva Lingayata Maha Vedike Regd, founded 2010, Regd 2012 headed by Sri Prashanth Kallur
(210)

29/08/2026

ರಾಜಗುರು ತಿಲಕ ಗ್ರಾಮೀಣ ಮಕ್ಕಳ ಆಶಾಕಿರಣ, ಲಿಂಗೈಕ್ಯ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಶಿವಯೋಗಿಗಳವರ 111ನೇ ಜಯಂತೋತ್ಸವದ ಶುಭಾಶಯಗಳು..

#ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #ವೀರಶೈವ_ಲಿಂಗಾಯತ_ಯುವ_ವೇದಿಕೆ

ಶ್ರೀ ರವಿ ಕೆ. ಬಿ, ಪೊಲೀಸ್ ಇನ್ಸ್ ಪೆಕ್ಟರ್ ಸೈಬರ್ ಪೊಲೀಸ್ ಠಾಣೆ,ಈಶಾನ್ಯ ವಿಭಾಗ, ಬೆಂಗಳೂರು ನಗರ ರವರನ್ನು ನಾವಷ್ಟೇ ಅಲ್ಲ ಪೊಲೀಸ್ ಇಲಾಖೆ ಮತ್...
28/08/2026

ಶ್ರೀ ರವಿ ಕೆ. ಬಿ, ಪೊಲೀಸ್ ಇನ್ಸ್ ಪೆಕ್ಟರ್ ಸೈಬರ್ ಪೊಲೀಸ್ ಠಾಣೆ,ಈಶಾನ್ಯ ವಿಭಾಗ, ಬೆಂಗಳೂರು ನಗರ ರವರನ್ನು ನಾವಷ್ಟೇ ಅಲ್ಲ ಪೊಲೀಸ್ ಇಲಾಖೆ ಮತ್ತು ವೀರಶೈವ ಲಿಂಗಾಯತ ಸಮಾಜ ಕಳೆದುಕೊಂಡಿದೆ. ಜನಸಾಮಾನ್ಯರ ಬಗ್ಗೆ, ನೊಂದವರ ಬಗ್ಗೆ ಅತೀವ ಕಾಳಜಿ ಹೊಂದಿದ್ದ, ಸದಾ ಕಾರ್ಯತತ್ಪರತೆ ಮತ್ತು ಸಮಾಜಮುಖಿ ಚಿಂತನೆಗಳನ್ನೊಂದಿದ್ದ ರವಿಯ ಅಕಾಲಿಕ ಮರಣ ನಮ್ಮೆಲ್ಲರ ಪಾಲಿಗೆ ತುಂಬಲಾರದ ನಷ್ಟ.

ರವಿಯವರು ತಮ್ಮ ಪ್ರೀತಿಯ ಪತ್ನಿ ಶ್ರೀಮತಿ ಅಕ್ಷಯ, ಮುದ್ದಿನ ಮಕ್ಕಳಾದ ಆದ್ವಿಕಾ ಮತ್ತು ಅದ್ವೈತ್ ಹಾಗೂ ಅಪಾರ ಬಂಧು-ಬಳಗವನ್ನು, ಸ್ನೇಹಿತರನ್ನು ಅಗಲಿದ್ದಾರೆ.

ಪಾರ್ಥಿವ ಶರೀರವು ಮಧ್ಯಪ್ರದೇಶದ ಇಂದೋರ್ ನಿಂದ ಹೊರಟಿದ್ದು ಸಂಜೆ 7:30 ಗಂಟೆಗೆ HAL ಏರ್ಪೋರ್ಟ್ ಗೆ ಆಗಮಿಸಲಿದ್ದು ರಾತ್ರಿ 8:30 ಗಂಟೆಯಿಂದ 10:30 ಗಂಟೆ ವರೆಗೆ CAR SOUTH ADUGODI ಇಲ್ಲಿ ಅಂತಿಮ ದರ್ಶನದ ವ್ಯವಸ್ಥೆಯನ್ನು ಈ ದಿನ 28-08-26ರ ಸಂಜೆ ಗಂಟೆಗೆ ಮಾಡಲಾಗಿದೆ. ಅಂತ್ಯಸಂಸ್ಕಾರ ಮೃತರ ಸ್ವಗ್ರಾಮ ಪಿರಿಯಾಪಟ್ಟಣ ತಾಲ್ಲೂಕ್ ಕೊಣಸೂರು ಗ್ರಾಮದಲ್ಲಿ ನಾಳೆ 29-08-26 ರಂದು ನೆಡೆಯಲಿದೆ.

ಅಗಲಿದ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ದುಃಖತಪ್ತ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

26/08/2026

ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ
111ನೇ ಜಯಂತಿ ಮಹೋತ್ಸವ..

29 ಆಗಸ್ಟ್ 2026
ಶ್ರೀ ಸುತ್ತೂರು ಮಠ, ಮೈಸೂರು.

ಲಿಂಗಾಯತ ಫಂಡಿಂಗ್ ಟ್ರಸ್ಟ್ (ನವಲಗುಂದದ ಶಿರಸಂಗಿ ಟ್ರಸ್ಟ್) ಗೆ ತಮ್ಮ ದೇಶಗತಿಯ ಸಮಸ್ತ ಆಸ್ತಿಯನ್ನು ಸಮಾಜದ ಅಭಿವೃದ್ಧಿಗೆ ವಿಲ್ ಮುಲಕ ಸರ್ಕಾರಿ ...
23/08/2026

ಲಿಂಗಾಯತ ಫಂಡಿಂಗ್ ಟ್ರಸ್ಟ್ (ನವಲಗುಂದದ ಶಿರಸಂಗಿ ಟ್ರಸ್ಟ್) ಗೆ ತಮ್ಮ ದೇಶಗತಿಯ ಸಮಸ್ತ ಆಸ್ತಿಯನ್ನು ಸಮಾಜದ ಅಭಿವೃದ್ಧಿಗೆ ವಿಲ್ ಮುಲಕ ಸರ್ಕಾರಿ ಟ್ರಸ್ಟ್ ರಚಿಸಿ ದಾಸೋಹ ಮಾಡಿದ ತ್ಯಾಗವೀರರು,ಅಖಿಲ ಭಾರತ ವೀರಶೈವ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರು, ಪೂಜ್ಯ ಶಿರಸಂಗಿ ನವಲಗುಂದ ಸಂಸ್ಥಾನದ ಕೊನೆಯ ದೇಸಾಯಿ ಆಗಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜ ಸರ್ ದೇಸಾಯಿ ಅವರು ಲಿಂಗೈಕ್ಯರಾದ ದಿನವಿಂದು. ಅವರ ಬದುಕು, ತ್ಯಾಗ ನಮಗೆ ಮಾದರಿಯಾಗಿದೆ.

#ಲಿಂಗರಾಜರು #ಪುಣ್ಯಸ್ಮರಣೆಯದಿನ

ವೀರಶೈವ ಲಿಂಗಾಯತ ಮಹಾ ವೇದಿಕೆ (ರಿ), ಬೆಂಗಳೂರು ಕರ್ನಾಟಕ.ಶ್ರೀ ಕ್ಷೇತ್ರ ಸುತ್ತೂರಿನ ಡಾ. ಶ್ರೀ. ಶ್ರೀ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ...
21/08/2026

ವೀರಶೈವ ಲಿಂಗಾಯತ ಮಹಾ ವೇದಿಕೆ (ರಿ), ಬೆಂಗಳೂರು ಕರ್ನಾಟಕ.

ಶ್ರೀ ಕ್ಷೇತ್ರ ಸುತ್ತೂರಿನ ಡಾ. ಶ್ರೀ. ಶ್ರೀ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111 ನೇ ಜಯಂತಿ ಮಹೋತ್ಸವದ ಅಂಗವಾಗಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ “ಆನ್ಲೈನ್ ಭಾಷಣ ಸ್ಪರ್ಧೆ”

ಭಾಷಣದ ವಿಷಯ:
“ಶ್ರೀ ಕ್ಷೇತ್ರ ಸುತ್ತೂರಿನ ಪರಮಪೂಜ್ಯ ಡಾ. ಶ್ರೀ. ಶ್ರೀ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳು”

ವಿಶೇಷ ಸೂಚನೆ :
*ಪ್ರೌಢ ಶಾಲೆಯ ವಿದ್ಯಾರ್ಥಿ/ವಿಧ್ಯಾರ್ಥಿನಿಯರು ಭಾಗವಹಿಸಬಹುದು (8ನೇ, 9ನೇ ಮತ್ತು 10ನೇ ತರಗತಿ).

*ಭಾಷಣ 3 ರಿಂದ 4 ನಿಮಿಷಗಳನ್ನು ಮೀರಬಾರದು

*ಭಾಷಣವನ್ನು ವಿಡಿಯೋ ರೆಕಾರ್ಡಿಂಗ್ ಮಾಡಿ 9242444444 ಸಂಖ್ಯೆಗೆ ಕಳುಹಿಸಿ.

*ಭಾಷಣದ ವಿಡಿಯೋವನ್ನು ಕಳುಹಿಸಲು ಕೊನೆಯ ದಿನಾಂಕ 10 ಸೆಪ್ಟೆಂಬರ್ 2026.

ಮೊದಲನೇ ಬಹುಮಾನ ರೂ.11,111/-
ಎರಡನೆಯ ಬಹುಮಾನ ರೂ.7,111/-
ಮೂರನೆಯ ಬಹುಮಾನ ರೂ.5,111/-
ಸಮಾಧಾನಕರ ಬಹುಮಾನ ರೂ.1,111/-

(ವಿಜೇತರಿಗೆ ನಗದು ಪುರಸ್ಕಾರ, ಶ್ರೀಗಳ ಭಾವಚಿತ್ರ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು.)

ಸರಳ ಸಜ್ಜನ ರಾಜಕಾರಣಿ,ನೇರ ನಡೆ-ನುಡಿಯ ತಿಪಟೂರಿನ ಮಾಜಿ ಶಾಸಕ,ಜನಪ್ರಿಯ ಮಾಜಿ ಶಿಕ್ಷಣ ಸಚಿವ,ಶಾಲೆಗಳಲ್ಲಿ “ವಿವೇಕ ಕೊಠಡಿಗಳ” ಕನಸುಗಾರ ಮತ್ತು ನನ...
18/08/2026

ಸರಳ ಸಜ್ಜನ ರಾಜಕಾರಣಿ,ನೇರ ನಡೆ-ನುಡಿಯ ತಿಪಟೂರಿನ ಮಾಜಿ ಶಾಸಕ,ಜನಪ್ರಿಯ ಮಾಜಿ ಶಿಕ್ಷಣ ಸಚಿವ,ಶಾಲೆಗಳಲ್ಲಿ “ವಿವೇಕ ಕೊಠಡಿಗಳ” ಕನಸುಗಾರ ಮತ್ತು ನನ್ನ ಆತ್ಮೀಯರಾಗಿದ್ದ ಶ್ರೀ ಬಿ.ಸಿ. ನಾಗೇಶ ಅವರು ಕೆಲ ದಿನಗಳ ಅನಾರೋಗ್ಯದ ಬಳಿಕ ಇಂದು ಸಂಜೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿದು ಅತೀವ ದುಃಖವಾಗಿದೆ.

ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ,ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕೊಡಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ.

ನಾಡಿನ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಎಲ್ಲಾ ಮಹನೀಯರಿಗೂ ನಮ್ಮ ಕೃತಜ್ಞತಾ...
15/08/2026

ನಾಡಿನ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಎಲ್ಲಾ ಮಹನೀಯರಿಗೂ ನಮ್ಮ ಕೃತಜ್ಞತಾ ಪೂರ್ವಕ ಗೌರವ ನಮನಗಳು.

ವಿಧಾನಸಭೆ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಜಿ.ಎಸ್.ಪಾಟೀಲ್ ರವರಿಗೆ ಅಭಿನಂದನೆಗಳು..
14/08/2026

ವಿಧಾನಸಭೆ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಜಿ.ಎಸ್.ಪಾಟೀಲ್ ರವರಿಗೆ ಅಭಿನಂದನೆಗಳು..

ಹೊಸಮಠದ ಪರಮ ಪೂಜ್ಯರ ಶಿವೈಕ್ಯ ಸುದ್ದಿಯು ಸಮಾಜಕ್ಕೆ ತುಂಬಲಾರದ ನಷ್ಟ.ಪರಮ ಪೂಜ್ಯರು ಮಾಡಿರುವ ಹಲವಾರು ಸಮಾಜಮುಖಿ ಕಾರ್ಯಗಳು ಶೈಕ್ಷಣಿಕ ಸಂಸ್ಥೆಗಳ...
13/08/2026

ಹೊಸಮಠದ ಪರಮ ಪೂಜ್ಯರ ಶಿವೈಕ್ಯ ಸುದ್ದಿಯು ಸಮಾಜಕ್ಕೆ ತುಂಬಲಾರದ ನಷ್ಟ.

ಪರಮ ಪೂಜ್ಯರು ಮಾಡಿರುವ ಹಲವಾರು ಸಮಾಜಮುಖಿ ಕಾರ್ಯಗಳು ಶೈಕ್ಷಣಿಕ ಸಂಸ್ಥೆಗಳು ಸಮಾಜದ ಹಲವರಿಗೆ ಆಶ್ರಯವಾಗಿದ್ದವು ಶ್ರೀಯುತರ ಆಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅವರ ಭಕ್ತ ವೃಂದಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇವೆ..

#ವೀರಶೈವ_ಲಿಂಗಾಯತ_ಮಹಾ_ವೇದಿಕೆ

Address

# 55, 2nd Cross, 3rd Main Road, Sanjaynagar Main Road, RMV 2nd Stage
Bangalore
560094

Alerts

Be the first to know and let us send you an email when ವೀರಶೈವ ಲಿಂಗಾಯತ ಮಹಾ ವೇದಿಕೆ, Veerashaiva Lingayata Maha Vedike posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ವೀರಶೈವ ಲಿಂಗಾಯತ ಮಹಾ ವೇದಿಕೆ, Veerashaiva Lingayata Maha Vedike:

Shortcuts

Share